More

    ಚರಂಡಿ ತ್ಯಾಜ್ಯದಿಂದ ಕೆರೆ ಮಲಿನ

    ಹನೂರು: ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಚರಂಡಿ ತ್ಯಾಜ್ಯ ಕೆರೆ ಸೇರಿ ಮಲಿನವಾಗಿದ್ದು, ಗ್ರಾಪಂ ಆಡಳಿತ ವಿರುದ್ಧ ಗ್ರಾಮಸ್ಥರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಕೆರೆಯ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆರೆಯು ತ್ಯಾಜ್ಯದಿಂದ ಸಂಪೂರ್ಣ ಮಲೀನಗೊಂಡಿತ್ತು. ಇದರಿಂದ ನೀರನ್ನು ಕುಡಿಯಲು ಬಳಕೆ ಮಾಡುತ್ತಿರಲಿಲ್ಲ. ಇದೀಗ ಆಗ್ಗಾಗ್ಗೆ ಜೋರು ಮಳೆಯಾಗುತ್ತಿರುವುದರಿಂದ ಚರಂಡಿ ಹಾಗೂ ಆಸುಪಾಸಿನಲ್ಲಿನ ತ್ಯಾಜ್ಯ ಎಲ್ಲ ಕೆರೆ ಸೇರುತ್ತಿದೆ. ಇದರಿಂದ ನೀರು ಮಲಿನಗೊಳ್ಳುತ್ತಿದೆ. ಜತೆಗೆ ಸುತ್ತಮುತ್ತಲಿನ ವಾತವರಣವೂ ಹದಗೆಡುತ್ತಿದೆ. ಗ್ರಾಪಂ ಅಧಿಕಾರಿಗಳು ಗಮನಹರಿಸಿ ಚರಂಡಿ ತ್ಯಾಜ್ಯ ಕೆರೆಗೆ ಸೇರದಂತೆ ಕ್ರಮ ವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts