More

    ಹೆಜ್ಜೇನು ದಾಳಿಗೆ ರೈತ ಸಾವು

    ಹನೂರು : ಹನೂರು ತಾಲೂಕಿನ ಬೆಳ್ಳತ್ತೂರು ಗ್ರಾಮದಲ್ಲಿ ಭಾನುವಾರ ಹೆಜ್ಜೇನು ದಾಳಿಗೆ ರೈತನೊಬ್ಬ ಮೃತಪಟ್ಟಿದ್ದಾನೆ.

    ಗ್ರಾಮದ ತುಳಸಿದಾಸ್ (45) ಮೃತರು. ಇವರು ್ಮ ಪತ್ನಿ ಆಶಾ ಜತೆಗೂಡಿ ತಮ್ಮ ಜಮೀನಿನಲ್ಲಿ ಜೋಳದ ಫಸಲಿಗೆ ಔಷಧಿ ಸಿಂಪಡಿಸುತ್ತಿದ್ದಾಗ ದಿಢೀರ್ ಹೆಜ್ಜೇನು ದಾಳಿ ನೆಡೆಸಿದೆ. ಈ ವೇಳೆ ಜೇನು ಕಡಿತದಿಂದ ತೀವ್ರವಾಗಿ ಗಾಯಗೊಂಡ ತುಳಸಿದಾಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts