More

    ಗಿರಿಜನರಿಂದ ರೊಟ್ಟಿ ಹಬ್ಬ ಆಚರಣೆ

    ಹನೂರು: ತಾಲೂಕಿನ ಕೌಳಿಹಳ್ಳ ಗ್ರಾಮದ ಗಿರಿಜನರು ರೊಟ್ಟಿಹಬ್ಬವನ್ನು ಆಚರಿಸುವ ಮೂಲಕ ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.


    ಶುಕ್ರವಾರ ಕೌಳಿಹಳ್ಳ ಗ್ರಾಮದ ಗಿರಿಜನರು ವಿವಿಧ ಪೋಡಿನ ಗಿರಿಜನರೊಡನೆ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಲ್ಲುಕಟ್ಟೆಯಿಂದ ನಿರ್ಮಿಸಿರುವ ಕಡುವಿನ ಮಾದಪ್ಪ ದೇಗುಲದಲ್ಲಿ ರೊಟ್ಟಿಹಬ್ಬವನ್ನು ಆಚರಿಸಿದರು.
    ಹಬ್ಬದ ಹಿನ್ನೆಲೆಯಲ್ಲಿ ದೇಗುಲವನ್ನು ಪುಷ್ಪ ಹಾಗೂ ಎಲೆಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ಸ್ವಾಮಿಗೆ ಪೂಜೆ ನೆರವೇರಿಸಲಾಯಿತಲ್ಲದೆ ಮರ, ಗಿಡ ಹಾಗೂ ನೀರಿಗೂ ಪೂಜೆ ಸಲ್ಲಿಸಲಾಯಿತು. ಬಳಿಕ ಎಲ್ಲರೂ ಒಗ್ಗೂಡಿ ರಾಗಿರೊಟ್ಟಿಯನ್ನು ಬೆಂಕಿಯಲ್ಲಿ ಬೇಯಿಸಿ ಅವರೆಕಾಳು-ಕುಂಬಳಕಾಯಿ ಮಿಶ್ರಿತ ಗೊಜ್ಜು (ಪಲ್ಯ) ತಯಾರಿಸಿ ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಪಂಕ್ತಿಸೇವೆಯಲ್ಲಿ ಸಹ ಭೋಜನ ನೆರವೇರಿಸುವ ಮೂಲಕ ರೊಟ್ಟಿಹಬ್ಬವನ್ನು ಸಂಪ್ರದಾಯದಂತೆ ಆಚರಿಸಿದರು. ಹನೂರು ಭಾಗದ ವಿವಿಧ ಪೋಡಿಗಳಲ್ಲಿನ ಗಿರಿಜನರು ಆಗಮಿಸಿ ದೇವರ ದರ್ಶನ ಪಡೆದು ಭೋಜನ ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts