More

    ಟಿಪ್ಪರ್‌ನಿಂದ ರಸ್ತೆಗೆ ಕೆಸರು ಮಣ್ಣು ಬಿದ್ದು ಸಂಚಾರಕ್ಕೆ ಅಡಚಣೆ

    ಹನೂರು : ಪಟ್ಟಣದ ಮಲೆಮಹದೇಶ್ವರ ಬೆಟ್ಟ ಮುಖ್ಯರಸ್ತೆಯ ಅಲ್ಲಲ್ಲಿ ಬುಧವಾರ ಟಿಪ್ಪರ್‌ನಲ್ಲಿ ಸಾಗಿಸುತ್ತಿದ್ದ ಕೆಸರು ಮಿಶ್ರಿತ ಮಣ್ಣು ಕುಸಿದು ಬಿದ್ದ ಪರಿಣಾಮ ವಾಹನ ಸವಾರರು ಸಂಚರಿಸಲು ಪರದಾಡಿದರು.

    ಪಟ್ಟಣ ಸಮೀಪದ ಉದ್ದನೂರು ಬಳಿಯ ಹುಬ್ಬೆಹುಣಸೆ ಡ್ಯಾಂನಿಂದ ಅಜ್ಜೀಪುರ ಭಾಗದ ಜಮೀನೊಂದಕ್ಕೆ ಬೆಳಗ್ಗೆ 11.15ರ ವೇಳೆಯಲ್ಲಿ ಹನೂರಿನ ಮೂಲಕ ಟಿಪ್ಪರ್ ಲಾರಿಯು ಕೆಸರು ಮಿಶ್ರಿತ ಮಣ್ಣನ್ನು ಸಾಗಿಸುತ್ತಿತ್ತು. ಈ ವೇಳೆ ಟಿಪ್ಪರ್‌ನ ಹಿಂಬದಿಯ ಕೊಂಡಿ ಕಳಚಿದೆ. ಆದರೆ ಇದರ ಅರಿವು ಚಾಲಕನ ಗಮನಕ್ಕೆ ಬಂದಿರಲಿಲ್ಲ. ಪರಿಣಾಮ ಪಟ್ಟಣದ ತಟ್ಟೆಹಳ್ಳ ಸೇತುವೆಯಿಂದ ಹಿಡಿದು ಪೆಟ್ರೋಲ್ ಬಂಕ್‌ವರೆಗೆ ರಸ್ತೆ ಮಧ್ಯೆಯ ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಸರು ಮಿಶ್ರಿತ ಮಣ್ಣು ಕುಸಿದು ಬಿದ್ದಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಲು ಕೆಲ ಗಂಟೆಗಳ ಕಾಲ ತೊಂದರೆ ಅನುಭವಿಸಿದರು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆ-ಶಿಪ್ ಅಧಿಕಾರಿಗಳು ಕ್ರಮವಹಿಸಿ ಮಧ್ಯಾಹ್ನ 1.30ರಲ್ಲಿ ರಸ್ತೆ ಮಧ್ಯೆ ಬಿದ್ದಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಬಳಿಕ ಮಣ್ಣನ್ನು ಸುರಕ್ಷಿತವಾಗಿ ಸಾಗಿಸುವಂತೆ ಲಾರಿ ಚಾಲಕನಿಗೆ ಎಚ್ಚರಿಕೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts