More

    2 ಆರ್‌ಒ ಪ್ಲಾಂಟಿದ್ದರೂ ಶುದ್ಧ ನೀರಿಲ್ಲ!, ಪ್ಲೋರೈಡ್‌ಯುಕ್ತ ಜಲ ಸೇವಿಸಿ ಕಾಯಿಲೆಗಳಿಂದ ಬಳಲುವ ಗ್ರಾಮಸ್ಥರು

    ಘಟಕ ನಿರ್ಮಾಣವಾಗಿ 3 ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ

    ಹನುಮಸಾಗರ: ಸಮೀಪದ ವೆಂಕಟಾಪುರದಲ್ಲಿ ಎರಡು ಆರ್‌ಒ ಪ್ಲಾಂಟ್‌ಗಳು ನಿರ್ಮಾಣವಾಗಿ ಎರಡ್ಮೂರು ವರ್ಷ ಕಳೆದರೂ ಗ್ರಾಮಸ್ಥರಿಗೆ ಶುದ್ಧ ನೀರು ಕುಡಿಯುವ ಯೋಗ ಒದಗಿ ಬಂದಿಲ್ಲ.

    ತುಮರಿಕೊಪ್ಪ ಗ್ರಾಪಂ ವ್ಯಾಪ್ತಿಯ ವೆಂಕಟಾಪುರದಲ್ಲಿ 1500 ಜನ ವಾಸ ಮಾಡುತ್ತಿದ್ದು. 2017-18 ರಲ್ಲಿ ಎಚ್‌ಕೆಆರ್‌ಡಿಬಿ ಯೋಜನೆಯಡಿ ಮುಖ್ಯಮಂತ್ರಿಗಳ ಮಾದರಿ ಗ್ರಾಮ ಯೋಜನೆಯಿಂದ ಒಂದು ಹಾಗೂ ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಿಂದ ಒಂದು ಘಟಕ ನಿರ್ಮಾಣ ಮಾಡಲಾಗಿದೆ. ಆದರೆ, ಎರಡು ಘಟಕಗಳೂ ಈವರಗೆ ಉದ್ಘಾಟನೆ ಆಗಿಲ್ಲ. ಇದರಿಂದ ಪ್ಲೋರೈಡ್‌ಯುಕ್ತ ನೀರನ್ನೆ ಕುಡಿಯಬೇಕಾಗಿದ್ದು, ಕೈ, ಕಾಲು ನೋವಿನಿಂದ ಗ್ರಾಮಸ್ಥರು ಬಳಲಬೇಕಾಗಿದೆ. ಘಟಕ ಪ್ರಾರಂಭಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಮಾತ್ರ ಘಟಕಗಳ ವೀಕ್ಷಣೆ ಮಾಡುವ ಅಧಿಕಾರಿಗಳು ಮುಂದೆ ಯಾವುದೇ ಕ್ರಮಗಳನ್ನು ಕೈಗೊಳುವುದಿಲ್ಲ. ಕೂಡಲೇ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಆರ್‌ಒ ಪ್ಲಾಂಟ್‌ಗಳನ್ನು ಪ್ರಾರಂಭ ಮಾಡಬೇಕೆಂದು ಗ್ರಾಮಸ್ಥರಾದ ಬಸು ರಾಠೋಡ, ಬುದ್ದಿವಂತ, ರವಿ, ಮಲ್ಲಪ್ಪ ಸೇರಿ ಇತರರು ಒತ್ತಾಯಿಸಿದ್ದಾರೆ.

    ನೀರಿನ ಸಮಸ್ಯೆಯಿಂದ ವೆಂಕಟಾಪುರದಲ್ಲಿ ಈ ಹಿಂದೆ ಆರ್‌ಒ ಪ್ಲಾಂಟ್‌ಗಳನ್ನು ಪ್ರಾರಂಭಿಸಿರಲಿಲ್ಲ. ಸದ್ಯ ಗ್ರಾಮದ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಒಂದು ಬೋರ್‌ವೇಲ್ ಪ್ರಾರಂಭ ಮಾಡಲಾಗಿದೆ. ಎರಡ್ಮೂರು ದಿನಗಳಲ್ಲಿ ಇನ್ನೊಂದು ಬೋರ್‌ವೇಲ್ ಪ್ರಾರಂಭ ಮಾಡಲಾಗುತ್ತಿದ್ದು, ಸದ್ಯದಲ್ಲೇ ಆರ್‌ಒ ಪ್ಲಾಂಟ್‌ಗಳನ್ನು ಪ್ರಾರಂಭಿಸಲಾಗುವುದು.
    | ಯಮನೂರಪ್ಪ ಹಳಬರ, ಪಿಡಿಒ ತುಮರಿಕೊಪ್ಪ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts