More

    ಶುದ್ಧ ಕುಡಿಯುವ ನೀರು ಸೇವನೆಯಿಂದ ಉತ್ತಮ ಆರೋಗ್ಯ

    ನವಲಗುಂದ: ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಗೃಹಗಳು ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯಹಾಗೂ ದೈಹಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ ಎಂದು ಶಿಕ್ಷಣ ಪ್ರೇಮಿ ಶಂಕರಗೌಡ ಫಕೀರಗೌಡರ ಹೇಳಿದರು.

    ತಾಲೂಕಿನ ಬಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶಪಾಂಡೆ ಫೌಂಡೇಷನ್ ಸಹಯೋಗದಲ್ಲಿ ಗುಜರಾತಿನ ಯುವ ಅನ್​ಸ್ಟಾಪೇಬಲ್ ಸ್ವಯಂ ಸೇವಾ ಸಂಸ್ಥೆ ನಿರ್ವಿುಸಿರುವ ಶುದ್ಧ ಕುಡಿಯುವ ನೀರಿನ ಕೊಠಡಿ, ಬಾಲಕ ಮತ್ತು ಬಾಲಕಿಯರ ಶೌಚಗೃಹಗಳನ್ನು ಉದ್ಘಾಟಿಸಿ ವರು ಮಾತನಾಡಿದರು.

    ಹನಮಂತಗೌಡ ಪಾಟೀಲ ಮಾತನಾಡಿ, ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳ ಹಾಗೂ ದಾಖಲಾದ ಮಕ್ಕಳು ಶಾಲೆಯಲ್ಲಿ ಉಳಿಯಲು ಇಂತಹ ಮೂಲಸೌಲಭ್ಯಗಳು ಅತ್ಯವಶ್ಯ. ಇವುಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಿುಸಿಕೊಟ್ಟ ಯುವ ಅನ್​ಸ್ಟಾಪೇಬಲ್ ಸ್ವಯಂ ಸೇವಾ ಸಂಸ್ಥೆಯವರ ಸಹಾಯ, ಸಹಕಾರ ಸದಾ ಸ್ಮರಣೀಯ ಎಂದರು.

    ಎಸ್​ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಗಾಡದ ಅಧ್ಯಕ್ಷತೆ ವಹಿಸಿದ್ದರು. ಪಿ.ಎನ್. ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಪ್ಪ ಗಾಣಿಗೇರ, ಶಿವಪ್ಪ ಹೊನ್ನಮೀಸಿ, ಹನಮಂತಗೌಡ ಹುಡೇದ, ಶರಣಪ್ಪ ಪವಾಡಿ, ನಾಗಪ್ಪ ಹುಣಸೀಮಟ್ಟಿ, ಗುರುಸಿದ್ದಪ್ಪ ಅಕ್ಕಿ, ಸಂಕನಗೌಡ ಪಾಟೀಲ, ನಾಗರಾಜ ಖಂಡಪ್ಪನವರ, ಚಿದಾನಂದ ರಾಯಗೊಣ್ಣವರ, ರಾಜೇಶ್ವರಿ ಖಾನಣ್ಣವರ, ಶೋಭಾ ಅಮರಶೆಟ್ಟಿ, ಲಕ್ಷ್ಮೀ ಗೋನಾಳ, ಶಾಂತವ್ವ ಕುರಿ, ರೇಷ್ಮಾಬಾನು ಹಂಚಿನಾಳ, ಎಂ.ಬಿ. ಪವಾಡಶೆಟ್ಟರ, ಎಸ್.ಬಿ. ಕಡಕೋಳ, ಬಿ.ಎಸ್. ಕುರಿ, ರೇಣುಕಾ ರೇಣ್ಕಿಗೌಡ್ರ, ಇತರರಿದ್ದರು. ಎನ್.ಎನ್. ಮಾಳಣ್ಣವರ, ನಿರ್ಮಲಾ ಎ. ಸಂಗಳ, ಎಸ್.ಬಿ. ಸವದತ್ತಿ ಹಾಗೂ ದೀಪಕ್ ಮುತಾಲಿಕ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts