More

    ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿ

    ಹುಬ್ಬಳ್ಳಿ : ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನವಾಗಿವೆ ಎಂದು ಖ್ಯಾತ ವೈದ್ಯ ಡಾ. ಎಂ. ಜೆ. ಜೀವಣ್ಣವರ ಹೇಳಿದರು.

    ಇಲ್ಲಿನ ತಾರಿಹಾಳ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸಮಾಜದಿಂದ ಸಾಕಷ್ಟು ಅನುಕೂಲ ಪಡೆದು ಜೀವನದಲ್ಲಿ ಸಾಧನೆ ಮಾಡಿರುವವರು ಸಮಾಜಕ್ಕೆ ಏನಾದರೂ ವಾಪಸ್ ನೀಡಿ ಸಮಾಜದ ಋಣ ತೀರಿಸುವವರು ಸಾರ್ಥಕ ವ್ಯಕ್ತಿಗಳೆನಿಸಿಕೊಳ್ಳುತ್ತಾರೆ. ಅಂತವರ ಸಾಲಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಶಿಬಿರ ಉದ್ಘಾಟಿಸಿದ ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿಯಾಗಿದೆ. ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ತಿಳಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಸಮನ್ವಯ ತಂಡದ ಮುಖ್ಯಸ್ಥ, ಕಿಮ್್ಸ ವೈದ್ಯ ಡಾ. ಮುಲ್ಕಿಪಾಟೀಲ, ಇಂದಿನ ಒತ್ತಡ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

    ಶಿಬಿರದಲ್ಲಿ ಭಾಗವಹಿಸಿದ ಒಂದು ಸಾವಿರ ಜನರಿಗೆ ವೈದ್ಯರ ತಂಡವು ಮಧುಮೇಹ, ರಕ್ತದೊತ್ತಡ, ಇಸಿಜಿ, ಚಿಕ್ಕಮಕ್ಕಳ ಕಾಯಿಲೆಗಳು ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮಾಡಿದರು.

    37 ಜನರಿಗೆ ಕಣ್ಣಿನ ಪೊರೆ ಶಸ್ತ್ರಕಿತ್ಸೆಗೆ ಆಯ್ಕೆ ಮಾಡಲಾಯಿತು.

    ರಾಮಣ್ಣ ಬಡಿಗೇರ, ಚಂದ್ರಶೇಖರ ಮನಗುಂಡಿ, ಡಾ. ಶ್ರೀನಿವಾಸ ಜೋಶಿ, ಡಾ. ಹೊಸಕಟ್ಟಿ, ಬಸವರಾಜ ಗರಗ, ಜಿ. ವೆಂಕಟೇಶ, ಸುರೇಶ ಜಾಧವ, ಮಹಾದೇವಪ್ಪ ಬೆಳವಲದ, ಗದಿಗೆಯ್ಯ ಹಿರೇಮಠ, ಪ್ರಕಾಶ ಜೋಶಿ, ನರೇಂದ್ರ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

    ಈರಣ್ಣ ಪೂಜಾರ ಸ್ವಾಗತಿಸಿದರು. ಮೌನೇಶ ಬಡಿಗೇರ ನಿರೂಪಿಸಿದರು. ಬಿ. ವೆಂಕಟೇಶ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts