More

    ಆಹಾರ ಸೇವನೆಯಲ್ಲಿ ಶುಚಿತ್ವ ಕಾಪಾಡಿ

    ಕುರುಗೋಡು: ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿನಿತ್ಯ ದೈಹಿಕ ಚಟುವಟಿಕೆಗೆ ಅವಶ್ಯಕ ಎಂದು ದಂತ ವೈದ್ಯೆ ಡಾ.ಗಾಯತ್ರಿ ಹೇಳಿದರು.

    ಇದನ್ನೂ ಓದಿ: ಆಹಾರ ಸೇವನೆಯಲ್ಲಿ ಶುಚಿತ್ವ ಕಾಪಾಡಿ

    ಬಸ್ ಡಿಪೋದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಚಾಲಕರಿಗೆ, ನಿರ್ವಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಂಗಳವಾರ ಮಾತನಾಡಿದರು.

    ಘಟಕದಲ್ಲಿ ಪ್ರತಿಯೊಬ್ಬರೂ ವಾಹನ ಚಾಲನೆ ಜತೆಗೆ ಇತರೆ ಕೆಲಸ ಮಾಡುವುದರಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಆದ್ದರಿಂದ, ಡಿಪೋದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮೊಬೈಲ್, ಟಿ.ವಿ, ವಾಹನಗಳಿಂದ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದರು.

    ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರು, ಗಾಳಿ, ತರಕಾರಿ, ಸೊಪ್ಪು, ಆಹಾರ ಧಾನ್ಯಗಳಿಗೆ ಅತೀ ಹೆಚ್ಚಿನ ಕ್ರಿಮಿನಾಶಕ ಮತ್ತು ಗೊಬ್ಬರಗಳ ಬಳಕೆಯಿಂದ ಸೇವಿಸುವ ಆಹಾರ ವಿಷಪೂರಿತವಾಗಿದೆ. ನಿತ್ಯ ಆಹಾರ ಸೇವನೆಯಲ್ಲಿ ಸ್ವಚ್ಛತೆ ಕಾಪಾಡಿ ಎಂದರು.

    ದಂತ, ನೇತ್ರ, ಮಧುಮೇಹ, ರಕ್ತದ ಒತ್ತಡ, ಕ್ಯಾನ್ಸರ್ ಸೇರಿ ಅಸಾಂಕ್ರಾಮಿಕ ಕಾಯಿಲೆಗಳ ತಪಾಸಣೆ ಮಾಡಲಾಯಿತು. ಆಪ್ತ ಸಮಾಲೋಚಕಿ ನೇತ್ರಾವತಿ, ಡಿಇಒ ಎಚ್.ಶೇಖರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts