More

    ಆಹಾರ, ಗಾಳಿಯಷ್ಟೇ ಶುದ್ಧ ನೀರೂ ಮುಖ್ಯ

    ಸಂಡೂರು: ಆಹಾರ, ಗಾಳಿ, ವಸತಿಯಷ್ಟೇ ಶುದ್ಧ ಕುಡಿವ ನೀರೂ ಮುಖ್ಯ ಎಂದು ಮಿನೆರಾ ಕಾರ್ಖಾನೆಯ ನಿರ್ದೇಶಕ ಟಿ.ಹನುಮಂತರೆಡ್ಡಿ ಹೇಳಿದರು.

    ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಕಂಪನಿಯ ಸಿಎಸ್‌ಆರ್ ಯೋಜನೆಯಡಿ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ನೀರು ಅತ್ಯಮೂಲ್ಯವಾಗಿದ್ದು, ಹಿತಮಿತವಾಗಿ ಬಳಸುವ ಮೂಲಕ ಎಲ್ಲರಿಗೂ ಶುದ್ಧ ನೀರು ದೊರೆಯುವಂತೆ ಮಾಡಬೇಕು ಎಂದರು.

    ಕಂಪನಿಯ 5.51ಲಕ್ಷ ರೂ. ವೆಚ್ಚದಲ್ಲಿ ಗಂಟೆಗೆ 2000 ಸಾವಿರ ಲೀ. ಶುದ್ಧ ನೀರು ನೀಡುವ ಘಟಕ, ಸಿಮೆಂಟ್ ಪ್ಲಾಟ್ ಫಾರಂ, ನೀರಿನ ಸಂಪು ಹಾಗೂ ಸುಸಜ್ಜಿತ ಕೊಠಡಿಗೆ ಬಣ್ಣದ ಲೇಪನ ಮಾಡಿ ಗ್ರಾಮ ಸಮಿತಿಗೆ ಹಸ್ತಾಂತರಿಸಲಾಯಿತು. ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ಎಸ್.ಚಂದ್ರಶೇಖರ್, ಗ್ರಾಮದ ಮುಖಂಡರಾದ ವೆಂಕಟೇಶ ರೆಡ್ಡಿ, ಭೀಮರೆಡ್ಡಿ, ಕೆ.ನಾಗರಾಜ್, ಗೋವಿಂದರೆಡ್ಡಿ, ಶ್ರೀನಿವಾಸ ರೆಡ್ಡಿ, ಮಲ್ಲಿಕಾರ್ಜುನ, ಹೊನ್ನೂರಪ್ಪ, ಮೌನೇಶ್, ಹುಲುಗಪ್ಪ, ವಿರೂಪಾಕ್ಷಿ, ಶಿವರುದ್ರ, ತಿಮ್ಮಾರೆಡ್ಡಿ, ಜಂಬಯ್ಯ, ವೆಂಕಟೇಶ್, ಶಿವಾರೆಡ್ಡಿ, ಗುತ್ತಿಗೆದಾರ ಮೋಹನ್ ರೆಡ್ಡಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts