More

    ಕ್ಷಯ ನಿರ್ಮೂಲನೆಗೆ ಗ್ರಾಪಂ ಸಹಕಾರ ಅಗತ್ಯ; ನಿರ್ಮೂಲನ ಅಧಿಕಾರಿ ಡಾ.ಎಂ.ಜಿ.ಮಹೇಶ ಅಭಿಪ್ರಾಯ

    ಹನುಮಸಾಗರ: ಗ್ರಾಪಂ ಮಟ್ಟದಿಂದ ಸಹಕಾರ ದೊರೆತರೆ ಕ್ಷಯಮುಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಎಂ.ಜಿ.ಮಹೇಶ ಹೇಳಿದರು.

    ಕಾಟಾಪುರ ಗ್ರಾಪಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ, ಕುಷ್ಟಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಹೂಲಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಷಯಮುಕ್ತ ಗ್ರಾಪಂ ಅಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದಲ್ಲಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳ ಬಗ್ಗೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಗ್ರಾಪಂ ಸದಸ್ಯರು ಮಾಹಿತಿ ನೀಡಲಿ ಎಂದರು.

    ವೈದ್ಯಾಧಿಕಾರಿ ಎನ್.ಆರ್.ಪವಾರ ಮಾತನಾಡಿ, ಆರಂಭದಲ್ಲೇ ನಿರಂತರ ಚಿಕಿತ್ಸೆಯಿಂದ ಕ್ಷಯ ಗುಣಪಡಿಸಬಹುದು. ಎರಡು ವಾರಕ್ಕಿಂತ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು ಕ್ಷಯದ ಲಕ್ಷಣಗಳು. ಕಫ ಮಾದರಿ ಪರೀಕ್ಷೆ, ಬಯಾಪ್ಸಿ ಹಾಗೂ ಸಿಬಿನೆಟ್ ಪರೀಕ್ಷೆ ಮೂಲಕ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts