More

    ತೊಗರಿಗೆ ನೀಡುತ್ತಿರುವ ಬೆಂಬಲ ಬೆಲೆ ಹೆಚ್ಚಿಸಿ

    ಹನುಮಸಾಗರ: ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿ ಆರಂಭಿಸಿರುವ ತೊಗರಿ ಖರೀದಿ ಕೇಂದ್ರಕ್ಕೆ ಬುಧವಾರ ಹಸಿರು ಸೇನೆ ಹಾಗೂ ರೈತ ಸಂಘ ಮತ್ತು ರೈತರು ಮುತ್ತಿಗೆ ಹಾಕಿ, ತೊಗರಿಗೆ ನೀಡುತ್ತಿರುವ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿದರು.

    ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಮಾತನಾಡಿ, ಸರ್ಕಾರ ತೊಗರಿಗೆ ನೀಡುತ್ತಿರುವ ಬೆಂಬಲ ಬೆಲೆ ಕಡಿಮೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿ ಮಾಡಿರುವ ಬೆಲೆಗೆ ತೊಗರಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರು ಹೊರಗಡೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಬೆಂಬಲ ಬೆಲೆ ಹೆಚ್ಚಿಸುವಂತೆ ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಸರ್ಕಾರ 6,000 ರೂ. ಬೆಂಬಲ ಬಲೆ ನೀಡುತ್ತಿದ್ದು, ಕೂಡಲೇ ಇದನ್ನು 6500 ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

    ರೈತ ಸಂಘದ ಪದಾಧಿಕಾರಿಗಳಾದ ನಾಗಯ್ಯ ಸ್ಥಾವರಮಠ, ಅಹ್ಮದ್ ಮುದುಗಲ್, ಇಸ್ಮಾಯಿಲ್ಸಾಬ್ ತಹಸೀಲ್ದಾರ್, ಲಾಲಸಾಬ್ ಚೌದರಿ, ಶಿವಕಾಂತಪ್ಪ ಹಾದಿಮನಿ, ಬಸವರಾಜ ಮೋಟಗಿ, ಶರಣಪ್ಪ ಆಯನೂರು, ಮಹಿಬೂಬಸಾಬ್ ಗದ್ವಾಲ್, ರಾಮಣ್ಣ ಕೆ., ರುದ್ರಪ್ಪ ಬಾಚಲಾಪೂರ, ರಾಮಣ್ಣ ಪೂಜಾರಿ, ನ್ಯಾಫೆಡ್ ಸಿಬ್ಬಂದಿ ಹರೀಶ್ ಮತ್ತು ಮಹೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts