More

    ತೂಗು ಸೇತುವೆ ನಿರ್ವಣಕ್ಕೆ ರೂಪಾಲಿ ಚಾಲನೆ

    ಕಾರವಾರ/ಅಂಕೋಲಾ: ತಾಲೂಕಿನ ಡೋಂಗ್ರಿ-ಸುಂಕಸಾಳ ನಡುವೆ 3.40 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ವಣಕ್ಕೆ ಶಾಸಕಿ ರೂಪಾಲಿ ನಾಯ್ಕ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
    ಡೋಂಗ್ರಿ-ಸುಂಕಸಾಳ ನಡುವೆ ಗಂಗಾವಳಿ ನದಿ ಹರಿದಿದೆ. 2016ರಲ್ಲಿ ಗ್ರಾಮಕ್ಕೆ ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, 2019ರ ಪ್ರವಾಹದ ಸಂದರ್ಭದಲ್ಲಿ ತೂಗು ಸೇತುವೆ ಕೊಚ್ಚಿ ಹೋಗಿತ್ತು. ಅದಕ್ಕೆ 2 ಕೋಟಿ ಅನುದಾನ ಮಂಜೂರಾಗಿದ್ದರೂ ಹಣದ ಕೊರತೆಯಿಂದ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿತ್ತು. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೆಪ್ಪದ ಮೇಲೆ ಅಪಾಯದಲ್ಲಿ ನದಿ ದಾಟುವ ಪರಿಸ್ಥಿತಿ ಇತ್ತು. ಸುಮಾರು 20 ರಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸುಂಕಸಾಳಕ್ಕೆ ಬರಲು ನಿತ್ಯ ಸಂಕಟ ಅನುಭವಿಸುತ್ತಿದ್ದರು.
    2021 ರ ಜನವರಿ 24 ರಂದು ‘ವಿಜಯವಾಣಿ’ ‘ತೆಪ್ಪ ಏರಿ ಶಾಲೆಗೆ ಪಯಣ ವಿದ್ಯಾರ್ಥಿಗಳ ಪ್ರಾಣವೇ ಪಣ’ ಎಂಬ ಶೀರ್ಷಿಕೆಯಡಿ ವಿಸ್ತ್ರತ ವರದಿಯನ್ನು ಮಾಡಿತ್ತು. ಅದಕ್ಕೆ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ ಹೆಚ್ಚುವರಿ ಹಣ ಮಂಜೂರು ಮಾಡಿಸಿ ಟೆಂಡರ್ ಕರೆಯಲು ಇದ್ದ ಸಮಸ್ಯೆಯನ್ನು ನಿವಾರಿಸಿ, ನಿರಂತರ ಫಾಲೋ ಅಪ್ ಮಾಡಿ, ಈಗ ಸೇತುವೆ ನಿರ್ವಣಕ್ಕೆ ಚಾಲನೆ ನೀಡಿದ್ದಾರೆ. ಡೋಂಗ್ರಿ ಗ್ರಾಪಂ ಅಧ್ಯಕ್ಷೆ ಲತಾ ನಾಯ್ಕ, ಸುಂಕಸಾಳ ಗ್ರಾಪಂ ಅಧ್ಯಕ್ಷ ಸದಾನಂದ, ಪ್ರಮುಖರಾದ ಗೋಪಾಲಕೃಷ್ಣ ವೈದ್ಯ ಇದ್ದರು.


    ಕಳೆದ ಮೂರು ವರ್ಷದಿಂದ ನಾವು ದ್ವೀಪದಲ್ಲಿರುವ ಜನರಂತಾಗಿದ್ದೆವು. ತುಂಬಾ ಸಮಸ್ಯೆ ಅನುಭವಿಸಿದ್ದೆವು. ಶಾಸಕಿ ರೂಪಾಲಿ ನಾಯ್ಕ ಪ್ರಯತ್ನ ಮಾಡಿ ಸೇತುವೆ ಕಾಮಗಾರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅದಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಸಂತಸ ತಂದಿದೆ. ಈ ಮಳೆಗಾಲದ ಒಳಗೆ ಕಾಮಗಾರಿ ಮುಗಿಸಿಕೊಡಬೇಕು ಎಂಬುದು ನಮ್ಮ ಆಗ್ರಹ.
    | ರಾಜು ನಾಯ್ಕ ಡೋಂಗ್ರಿ ಗ್ರಾಮಸ್ಥ.


    ನೆರೆ ಆವರಿಸಿದಾಗ ಬೋಟ್ ಮೂಲಕ ನದಿ ದಾಟಿ, ರಾಡಿಯಲ್ಲಿ ನಡೆದುಕೊಂಡು ಈ ಗ್ರಾಮಕ್ಕೆ ಬಂದಿದ್ದೆ. ಜನರ ಪರಿಸ್ಥಿತಿ ನೋಡಿ ಕಂಗಾಲಾಗಿದ್ದೆ. ಗ್ರಾಮಕ್ಕೆ ಸೌಕರ್ಯ ಒದಗಿಸುವ ಪಣ ತೊಟ್ಟಿದ್ದೆ. ಅದರಂತೆ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ.
    | ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts