More

    ಎರಡನೇ ಬಾರಿ ನಿರಾಣಿ ಗೆಲುವು; 34 ಸಾವಿರ ಮತಗಳ ಅಂತರದಿಂದ ದಾಖಲೆ ಜಯ…

    ಬೆಳಗಾವಿ: ವಾಯವ್ಯ ‌ಪದವೀಧರ ಮತ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಣುಮಂತ ನಿರಾಣಿ ಎರಡನೇ ಬಾರಿ ಗೆಲುವು ಸಾಧಿಸಿದರು. ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭದಿಂದ ಮುನ್ನಡೆ ಕಾಯ್ದುಕೊಂಡು ಬಂದಿರುವ ಅಭ್ಯರ್ಥಿ ಹಣಮಂತ ನಿರಾಣಿ, 34 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

    ಪ್ರತಿ ಸ್ಪರ್ಧಿ ಕಾಂಗ್ರೆಸ್​ನ ಸುನೀಲ ಸಂಕ್ 9008 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಪದವೀಧರ ‌ಮತ ಕ್ಷೇತ್ರದಲ್ಲಿ ಒಟ್ಟು 99,150 ಮತಗಳ ಪೈಕಿ 65914‌ ಮತಗಳು ಚಲಾವಣೆ ಆಗಿವೆ.

    8 ಸಾವಿರಕ್ಕೂ ಅಧಿಕ ಮತಗಳು ತಿರಸ್ಕೃತ: ವಾಯವ್ಯ ಪದವೀಧರ ‌ಮತ ಕ್ಷೇತ್ರದ ಚುನಾವಣೆ ಯಲ್ಲಿ ಮತದಾರರು ಮತ ಪತ್ರದಲ್ಲೊ ಅಂಕಿ ಹಾಕುವ ಬದಲು ರೈಟ್ ಗುರುತು ಹಾಕಿದ್ದಾರೆ. ಕೆಲವರು ಮತ ಪತ್ರದಲ್ಲಿ ಉದ್ದ ಗೆರೆ ಹಾಕಿದ್ದಾರೆ. ‌ಇದರಿಂದಾಗಿ 8237 ಮತಗಳು ತಿರಸ್ಕೃತಗೊಂಡಿವೆ. ಈ ಎಲ್ಲ ಮತಗಳು ಬಿಜೆಪಿ ಅಭ್ಯರ್ಥಿಗೆ ಬಿದ್ದಿರುವುದು ವಿಶೇಷ ಎನ್ನಲಾಗಿದೆ.

    ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಬಿ.ಎಸ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಪಕ್ಷದ ಕಾರ್ಯಕರ್ತರು, ‌ಮುಖಂಡರಿಗೆ ಅಭಿನಂದನೆಗಳು.

    | ಹಣಮಂತ ನಿರಾಣಿ ವಿಜೇತ ಬಿಜೆಪಿ ಅಭ್ಯರ್ಥಿ

    ಪದವೀಧರ ಮತ‌ ಕ್ಷೇತ್ರ

    ಅಭ್ಯರ್ಥಿಗಳು: ಪಡೆದ ಮತ

    ಹಣಮಂತ ನಿರಾಣಿ: 44815
    ಸುನೀಲ ಸಂಕ: 10122
    ಜಿ.ಸಿ.‌ಪಾಟೀಲ: 194
    ವೈ. ಎಂ.‌ಕಲಕುಟ್ರಿ: 221
    ಎ.ಎಸ್. ಪೂಜಾರ: 370
    ಜಿ.ಎಂ. ಮುಗದುಮ್ಮ: 68
    ಎಸ್. ದೀಪಿಕಾ: 453
    ಎಂ.‌ಎನ್. ಭಜಂತ್ರಿ: 167
    ಬಿ.ಬಿ. ಭಾಗಿ: 168
    ಆರ್.‌ಆರ್. ಪಾಟೀಲ: 172
    ಸುಭಾಸ ಆರ್. ಕೊಟೆಕಲ್: 166

    • ಒಟ್ಟು ಮತದಾರರು: 65922
    • ತಿರಸ್ಕೃತ ಮತ: 8236
    • ಒಟ್ಟು ಎಣಿಕೆ‌ ಮತ: 56917
    • ಮತ ಎಣಿಕೆ ಸುತ್ತು: 7

    ಗೆಲುವಿನ ಹುಮ್ಮಸ್ಸು ಉಕ್ಕೇರಿ, ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಹುಕ್ಕೇರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts