More

    ಹಾನಗಲ್, ಸಿಂದಗಿಯಲ್ಲಿ ಬಿಜೆಪಿ ಜಯಭೇರಿ: ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ

    ಬೆಂಗಳೂರು: ಕೇಂದ್ರ, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ. ಉತ್ತಮ ಅಭಿವೃದ್ಧಿ ಕೆಲಸಗಳು, ಹತ್ತಾರು ಯೋಜನೆಗಳ ಜಾರಿಯಿಂದಾಗಿ ಜನರ ಒಲವು-ನಿಲುವು ಪಕ್ಷದ ಪರವಾಗಿದ್ದು, ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಚೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುವುದು ನಿಶ್ಚಿತವೆಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

    ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲೆಂದು ಭಾನುವಾರ ಬೆಂಗಳೂರಿಗೆ ಆಗಮಿಸಿರುವ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

    ಹಾನಗಲ್, ಸಿಂದಗಿ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಇವತ್ತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಿದ್ದೇವೆ. ಎರಡು ‌ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ. ಈಗಾಗಲೇ ಎರಡು ಉಪ ಚುನಾವಣೆ ಸಿದ್ದತೆ ನಾವು ಪ್ರಾರಂಭ ಮಾಡಿದ್ದೇವೆ. ಎರಡು‌ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಪುನರುಚ್ಚರಿಸಿದರು.

    ಉಪ‌ ಚುನಾವಣೆ ಜತೆಗೆ ಅನೇಕ ವಿಷಯಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಅಲ್ಲಿಯೇ ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದು.

    ಹಾನಗಲ್ ಟಿಕೆಟ್ ಸಂಸದ ಶಿವಕುಮಾರ್ ಉದಾಸಿ ಪತ್ನಿಗೆ ನೀಡಬೇಕೆಂಬ ವಿಚಾರವೂ ಸೇರಿದಂತೆ ಎಲ್ಲ ಆಕಾಂಕ್ಷಿಗಳ ವಿಚಾರವಾಗಿ ಸಭೆಯಲ್ಲಿ ಸಮಾಲೋಚಿಸಿ, ಇದಕ್ಕಾಗಿ ಪ್ಯಾನಲ್ ರಚನೆ ಮಾಡಲಾಗುವುದು. ಅಭ್ಯರ್ಥಿಗಳ ಶಿಫಾರಸು ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಿದ್ದು, ಯಾರು ಅಭ್ಯರ್ಥಿ ಎಂಬುದನ್ನು ಕೇಂದ್ರ ಚುನಾವಣೆ ಕಮಿಟಿ ಅಂತಿಮವಾಗಿ ಘೋಷಣೆ ಮಾಡುತ್ತದೆ ಎಂದು ಅರುಣ್ ಸಿಂಗ್ ಹೇಳಿದರು.

    ಬೊಮ್ಮಾಯಿ‌ಗೆ ಹೊಗಳಿಕೆ
    ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೊಗಳಿ ಬೆನ್ನುತಟ್ಟಿದ ಅರುಣ್ ಸಿಂಗ್, ಈ ಕೆಲಸಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು. ಸರ್ಕಾರದ ಯೋಜನೆಗಳು, ಕೆಲಸಗಳ ಬಗ್ಗೆ ವ್ಯಾಪಕ ಪ್ರಚಾರದ ಮೂಲಕ ಜನರಿಗೆ ತಲುಪಿಸಲು ಒತ್ತು ನೀಡಲಾಗುವುದು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಆದ್ಯತೆ, ಮುಂದಿನ ಯೋಜನೆಗಳು, ಕಾರ್ಯಕ್ರಮಗಳ ಇತ್ಯಾದಿ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ವಿವರಿಸಿದರು.

    ಸೀರೆ ನೋಡಿ ಹೆಂಡತಿ ಬೈಯದಿದ್ರೆ ಸಾಕು!: ಸಿಎಂ ಬಸವರಾಜ ಬೊಮ್ಮಾಯಿ

    ವಿಜಯನಗರ ಉದಯ, ಮರಳಿದ ವೈಭವ: ನೂತನ ಜಿಲ್ಲೆ ಅಭಿವೃದ್ಧಿಗೆ ಭರಪೂರ ಅನುದಾನ, ಕಾರ್ಯಕ್ರಮಕ್ಕೆ ಬೊಮ್ಮಾಯಿ ಚಾಲನೆ, ಬಿಎಸ್​ವೈ ಭಾಗಿ

    ಡಿವೋರ್ಸ್​ ಬೆನ್ನಲ್ಲೇ ಟ್ವೀಟ್​ ಮೂಲಕ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ನಟಿ ಸಮಂತಾ..!

    ಮದ್ವೆ ಎಂಬುದು ಸಾವು, ಡಿವೋರ್ಸ್​​ ಪುನರ್ಜನ್ಮ: ನಾಗಸಮಂತಾ ವಿಚ್ಛೇದನ ಬೆನ್ನಲ್ಲೇ ಆರ್​ಜಿವಿ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts