More

    ಐದು ತಿಂಗಳಾದರೂ ಅರ್ಧದಷ್ಟು ಫಲಾನುಭವಿಗಳಿಗೆ ಮಾತ್ರ ಕರೊನಾ ಲಸಿಕೆ!

    ನವದೆಹಲಿ : ಕರೊನಾ ಮಹಾಮಾರಿಯ ವಿರುದ್ಧ ಪ್ರಮುಖ ಅಸ್ತ್ರವೆಂದರೆ ಲಸಿಕೆ ಪಡೆಯುವುದು ಎಂದು ತಜ್ನರು ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಆದರೆ, ಆರಂಭಿಕ ಸಮಯದಲ್ಲಿ ಜನರಲ್ಲಿ ಮೂಡಿಬಂದ ಲಸಿಕೆ ಬಗೆಗಿನ ಹಿಂಜರಿಕೆ ಮತ್ತು ಲಸಿಕಾ ಕಾರ್ಯಕ್ರಮದ ಅನುಷ್ಠಾನದಲ್ಲಿ ಇರುವ ಲೋಪದೋಷಗಳಿಂದಾಗಿಯೋ ಅದು ಪೂರ್ಣ ಪ್ರಮಾಣದಲ್ಲಿ ಇನ್ನೂ ಫಲಪ್ರದವಾಗುತ್ತಿಲ್ಲ.

    ಭಾರತದಾದ್ಯಂತ ಶೇ. 56 ರಷ್ಟು ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಶೇ. 50 ಕ್ಕೂ ಕಡಿಮೆ ಮುಂಚೂಣಿ ಕಾರ್ಯಕರ್ತರು ಮಾತ್ರ ಈವರೆಗೆ ಕರೊನಾ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶ ತಿಳಿಸಿದೆ. ಜನವರಿ 16 ಕ್ಕೆ ಲಸಿಕಾ ಅಭಿಯಾನ ಆರಂಭವಾದಾಗಿನಿಂದ ಈ ವರ್ಗಕ್ಕೆ ಲಸಿಕೆ ಒದಗಿಸುತ್ತಿದ್ದರೂ, ಇಷ್ಟು ಕಡಿಮೆ ಪ್ರಮಾಣದಲ್ಲಿ ಲಸಿಕೀಕರಣವಾಗಿರುವ ಬಗ್ಗೆ ಖುದ್ದು ಸರ್ಕಾರವೇ ಕಳವಳ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ಮತಕ್ಕಾಗಿ ಹಿಂದೂ ಜತೆ ಮದುವೆ, ಗರ್ಭದಲ್ಲಿ ಬೇರೆಯವರ ಮಗು? ಸಂಸದೆಯ ಬಂಡವಾಳ ಬಯಲು!

    ಲಸಿಕಾ ಅಭಿಯಾನದ ಬಗ್ಗೆ ನಿನ್ನೆ ರಾಜ್ಯಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ಭೂಷಣ್ ಈ ಬಗ್ಗೆ ತಿಳಿಸಿದ್ದಾರೆ. ಇನ್ನು, ಆರೋಗ್ಯ ಕಾರ್ಯಕರ್ತರ ಲಸಿಕೀಕರಣ ಪ್ರಮಾಣವು ಪಂಜಾಬ್​, ಮಹಾರಾಷ್ಟ್ರ, ಹರಿಯಾಣ, ದೆಹಲಿ ಮತ್ತು ಅಸ್ಸಾಂ ಸೇರಿದಂತೆ 18 ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಮತ್ತೂ ಕಡಿಮೆ ಇದೆ. ಇದೇ ರೀತಿ 19 ರಾಜ್ಯಗಳು, ರಾಷ್ಟ್ರೀಯ ಸರಾಸರಿ ಶೇ.47 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಎರಡೂ ಡೋಸ್​ ಲಸಿಕೆ ನೀಡಿವೆ ಎಂದಿದ್ದಾರೆ.

    ಲಸಿಕಾ ಅಭಿಯಾನದಲ್ಲಿ ಖಾಸಗಿ ಕ್ಷೇತ್ರದ ಸಹಭಾಗಿತ್ವವು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ ಎಂದೂ ಹೇಳಲಾಗಿದೆ. ಶೇ. 25 ರಷ್ಟು ಲಸಿಕೆಗಳನ್ನು ಖಾಸಗಿ ಕ್ಷೇತ್ರಕ್ಕೆ ಮೀಸಲಿಟ್ಟಿದ್ದರೂ, ನಿನ್ನೆಯ ದಿನ ದೇಶದಲ್ಲಿ ನಡೆದ 42,279 ವ್ಯಾಕ್ಸಿನೇಷನ್ ಸೆಷನ್​ಗಳಲ್ಲಿ ಶೇ.4 ರಷ್ಟು ಮಾತ್ರ ಖಾಸಗಿ ವಲಯದಿಂದ ಕೈಗೊಳ್ಳಲ್ಪಟ್ಟಿವೆ, ಉಳಿದವೆಲ್ಲಾ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ನಡೆದಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಭಾರತೀಯ ಕಂಪೆನಿಗಳಿಂದ ಸೀಫುಡ್​ ಆಮದು ನಿಲ್ಲಿಸಿದ ಚೀನಾ! ಕಾರಣ ಏನು ಗೊತ್ತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts