More

    ಸುಳ್ಳದಲ್ಲಿ ಅರ್ಧಕ್ಕೆ ನಿಂತ ತೇರು

    ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದಲ್ಲಿ ಸೋಮವಾರ ನಡೆದಿದ್ದ ಶ್ರೀ ಕಲ್ಮೇಶ್ವರ ದೇವರ ರಥೋತ್ಸವ ವೇಳೆ ರಥವು ಅರ್ಧಕ್ಕೆ ನಿಂತಿದ್ದು, ಕಾಮಗಾರಿ ಕಳಪೆಯಿಂದಾಗಿ ಈ ಅವಘಡ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸಂಜೆ ವೇಳೆ ರಥವನ್ನು ಎಳೆದಿದ್ದು, ರಸ್ತೆಯಲ್ಲಿ ಎರಡೂ ಗಾಲಿಗಳು ಸಿಲುಕಿ ರಥ ಮುಂದಕ್ಕೆ ಹೋಗಿಲ್ಲ. ರಥದಲ್ಲಿದ್ದ ಉತ್ಸವ ಮೂರ್ತಿಯನ್ನು ಪಾದಗಟ್ಟೆವರೆಗೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಿ, ಮರಳಿ ದೇವಸ್ಥಾನದಲ್ಲಿ ಇಡಲಾಗಿದೆ. ರಥವು ಅರ್ಧಕ್ಕೆ ನಿಂತಿದ್ದರಿಂದ ಗ್ರಾಮಸ್ಥರಿಗೆ ಬೇಸರ ತರಿಸಿದೆ.

    ಶಾಸಕರ ಹಾಗೂ ಗ್ರಾಮ ಪಂಚಾಯಿತಿ ನಿಧಿಯಡಿ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿ ಕಳಪೆ ಆಗಿದ್ದರಿಂದ ರಥ ಅರ್ಧಕ್ಕೆ ನಿಲ್ಲುವಂತಾಗಿದೆ. ಇದರಿಂದ ಗ್ರಾಮಕ್ಕೆ ಒಳ್ಳೆಯದಾಗುವುದಿಲ್ಲ.

    ಕಾಮಗಾರಿ ಕಳಪೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ರೈತ ಸೇನಾ ವಕ್ತಾರ ಗುರು ರಾಯನಗೌಡ್ರ, ಗ್ರಾಮಸ್ಥರಾದ ಶೇಖಣ್ಣ ಹುಲೀಕಟ್ಟಿ, ಕಲ್ಲಪ್ಪ ಒಂಟಿ, ಕಲ್ಲಪ್ಪ ಜುಂಜಣ್ಣವರ, ರಾಯಪ್ಪ ರಾಯನಗೌಡ್ರ, ಕಲ್ಲಪ್ಪ ಐಹೊಳಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts