More

    ಹಕ್ಕಿಪಿಕ್ಕಿ ಭವನ ನಿರ್ಮಾಣಕ್ಕೆ ಮನವಿ

    ಚನ್ನಗಿರಿ: ರಾಜ್ಯದಲ್ಲಿ ಹಕ್ಕಿಪಿಕ್ಕಿ, ಆದಿವಾಸಿ, ಅಲೆಮಾರಿ, ಬುಡಕಟ್ಟು ಜನಾಂಗದ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸುವಂತೆ ಒತ್ತಾಯಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಹಕ್ಕಿಪಿಕ್ಕಿ ಆದಿವಾಸಿ ಅಲೆಮಾರಿ ಬುಡಕಟ್ಟು ಜನಾಂಗದ ರಾಜ್ಯಾಧ್ಯಕ್ಷ ಆರ್. ಪುನೀತ್ ಕುಮಾರ್ ಶನಿವಾರ ಮನವಿ ಸಲ್ಲಿಸಿದರು.

    ರಾಜ್ಯಪಾಲರು ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಜೋಳದಾಳು ಗ್ರಾಮದ ಬಳಿಯಲ್ಲಿ ಮನವಿ ಸ್ವೀಕರಿಸಿ ಭರವಸೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

    ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಆದಿವಾಸಿ ಅಲೆಮಾರಿ ಜನಾಂಗಕ್ಕೆ ನೆಲೆ ನಿಲ್ಲಲು ಅಗುತ್ತಿಲ್ಲ. ವಾಸವಿರಲು ಒಂದು ಮನೆ ಇಲ್ಲ. ನಿಲ್ಲಲು ನೆಲೆ ಇಲ್ಲದೆ ದೇಶ ಹಾಗೂ ಹೊರದೇಶಗಳಿಗೆ ವ್ಯಾಪಾರಕ್ಕೆಂದು ಹೋಗಿ ಸಂಕಷ್ಟ ಪಡುತ್ತಾರೆ. ಇದರಿಂದ ಸರ್ಕಾರದ ಸವಲತ್ತು ಪಡೆಯದೆ ಹಿಂದೆ ಉಳಿದಿದ್ದಾರೆ ಎಂದರು.

    ರಾಜ್ಯದ ರಾಜಧಾನಿಯಲ್ಲಿ ಹಕ್ಕಿಪಿಕ್ಕಿ ಭವನ ನಿರ್ಮಾಣ ಮಾಡಿಕೊಡಬೇಕು, ಸರ್ವಾಂಗೀಣ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಬೇಕು, ವಿಶೇಷ ಶಾಲೆಗಳ ಹಾಗೂ ವಸತಿ ನಿಲಯಗಳ ವ್ಯವಸ್ಥೆ ಮಾಡಿಕೊಡಬೇಕು, ಸಂಶೋಧನಾತ್ಮಕ ಅಭ್ಯಾಸ ಮಾಡಲು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಧ್ಯಯನ ಪೀಠ ರಚನೆ ಮಾಡಬೇಕು ಎಂದರು.

    ಹಕ್ಕಿಪಿಕ್ಕಿ ಸಮಾಜದವರು ವಾಸ ಮಾಡುವಂತ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಮೂಲಕ ಹಕ್ಕುಪತ್ರ ನೀಡಬೇಕು. ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts