More

    ಪಾಕಿಸ್ತಾನದ ಈ ಕ್ರಿಕೆಟಿಗನಿಗೆ ವಿರಾಟ್​ ಕೊಹ್ಲಿಯಂತಾಗುವುದು ಇಷ್ಟವಿಲ್ಲವಂತೆ!

    ನವದೆಹಲಿ: ಭಾರತದ ಕ್ರಿಕೆಟ್​ ಲೋಕದಲ್ಲಿ ಸದ್ಯ ಆಳ್ವಿಕೆ ನಡೆಸುತ್ತಿರುವುದು ವಿರಾಟ್​ ಕೊಹ್ಲಿ. ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್​ ಕೊಹ್ಲಿಯಂತಾಗಬೇಕು ಎಂದು ಅನೇಕ ಯುವ ಕ್ರಿಕೆಟಿಗರು ಕನಸು ಕಾಣುತ್ತಾರೆ. ಆದರೆ ಪಾಕಿಸ್ತಾನದ ಪ್ರಸಿದ್ಧ ಆಟಗಾರನೊಬ್ಬನಿಗೆ ಆತ ವಿರಾಟ್​ ಕೊಹ್ಲಿಯಂತಾಗುವುದು ಇಷ್ಟವಿಲ್ಲವಂತೆ.

    19 ವರ್ಷದೊಳಗಿನವರ ವಿಶ್ವಕಪ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಪಾಕಿಸ್ತಾನಕ್ಕೆ ಸಿಕ್ಕಿದ್ದು ಒಬ್ಬ ಅದ್ಭುತ ಆಟಗಾರ. ಹೈದರ್​ ಅಲಿ ಹೆಸರಿನ ಆಟಗಾರ ಪಾಕಿಸ್ತಾನದ ಕ್ರಿಕೆಟ್​ ತಂಡದ ಮುಂದಿನ ನಾಯಕ ಎಂದು ಅನೇಕರು ಮಾತನಾಡುತ್ತಿದ್ದಾರೆ. ತನ್ನ ಬ್ಯಾಟಿಂಗ್​ ಮೂಲಕ ಪೂರ್ತಿ ಪ್ರಪಂಚಕ್ಕೆ ಪರಿಚಿತನಾದ ಈ ಬ್ಯಾಟ್ಸ್​ಮೆನ್​ಗೆ ತಾನು ವಿರಾಟ್​ ಕೊಹ್ಲಿಯಂತಾಗುವುದು ಇಷ್ಟವಿಲ್ಲವಂತೆ, ಬದಲಾಗಿ ತಾನು ಪಾಕಿಸ್ತಾನದ ಕ್ರಿಕೆಟಿಗ ಬಾಬರ್​ ಅಜಮ್​ನಂತಾಗಬೇಕಂತೆ.

    ಒಬ್ಬ ಬ್ಯಾಟ್ಸ್​ಮೆನ್​ ತನ್ನ ಆದರ್ಶ ವ್ಯಕ್ತಿಯಂತೆ ಆಗುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಅವರಂತೆ ಆಗುವ ಪ್ರಯತ್ನ ಮಾಡಬಹುದು. ವಿರಾಟ್​ ಕೊಹ್ಲಿಗಿಂತ ಬಾಬರ್​ ಅಜಮ್​ ಉತ್ತಮ ಆಟಗಾರನಾಗಿರುವುದರಿಂದ ನಾನು ಬಾಬರ್​ ಅಜಮ್​ನಂತಾಗಬೇಕು ಎಂದು ಆತ ಹೇಳಿಕೊಂಡಿದ್ದಾನೆ.

    ನಾನು ಪ್ರಥಮ ದರ್ಜೆ ಪಂದ್ಯಾವಳಿಯಲ್ಲಿ ಬಾಬರ್​ ಅಜಮ್​ರನ್ನು ಭೇಟಿಯಾಗಿದ್ದೆ. ಅವರು ನನಗೆ ಬ್ಯಾಟಿಂಗ್​ ಸಲಹೆ ನೀಡಿದ್ದರು. ಲಾಹೋರ್​ನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ನಾವು ಅವರಿಂದ ಸಾಕಷ್ಟು ಕಲಿತಿದ್ದೇವೆ. ಪಿಎಸ್​ಎಲ್​ ಸಮಯದಲ್ಲಿ ಅವರು ನನಗೆ ಆತ್ಮಸ್ಥೈರ್ಯ ತುಂಬಿದ್ದರು. ನೀನು ಕೇವಲ ರನ್​ ಗಳಿಸುವತ್ತ ಗಮನವಿಡು ಮುಂದಿನದನ್ನು ಅಲ್ಲಾಹ ನೋಡಿಕೊಳ್ಳುತ್ತಾನೆ ಎಂದು ಭರವಸೆ ತುಂಬಿದ್ದರು ಎಂದು ಆತ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

    ಮೋದಿಜೀ.. ಕೊಲ್ಕತ್ತಾ ಏರ್​ಪೋರ್ಟ್​ಗೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿ; ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts