More

    ಮೋದಿಜೀ.. ಕೊಲ್ಕತ್ತಾ ಏರ್​ಪೋರ್ಟ್​ಗೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿ; ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ

    ಕೊಲ್ಕತ್ತಾ: ಚೀನಾದಲ್ಲಿ ಹುಟ್ಟಿ ಕೇವಲ ಒಂದೂವರೆ ತಿಂಗಳಿನಲ್ಲಿ ವಿಶ್ವವ್ಯಾಪಿಯಾಗಿ ಹರಡಿರುವ ಕರೊನಾ ವೈರಸ್​ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೊಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯ ಬಳಿ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಬೇರೆ ರಾಜ್ಯ ಮತ್ತು ಬೇರೆ ದೇಶಗಳಿಂದ ಬರುತ್ತಿರುವವರಿಂದ ಕರೊನಾ ವೈರಸ್​ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೊಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸೋಂಕು ನಿವಾರಣೆಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ವಿಮಾನ ನಿಲ್ದಾಣಗಳ ಮೇಲೆ ಹೆಚ್ಚಿನ ನಿಗಾ ಇಡುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.

    ಮಾರ್ಚ್​ 22ರಂದು ಪೂರ್ತಿ ದೇಶವೇ ಜನತಾ ಕರ್ಫ್ಯೂ ಆಚರಿಸಿದ್ದರೂ, ಪಶ್ಚಿಮ ಬಂಗಾಳದ ಸರ್ಕಾರ ತನ್ನ ರಾಜ್ಯದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಶಾಲೆಗೆ ಬರುವಂತೆ ತಿಳಿಸಿತ್ತು. ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಮನೆಗೇ ತಲುಪಿಸಬೇಕಿರುವ ಕಾರಣ ಅದರ ತಯಾರಿಗೆಂದು ಶನಿವಾರ ಮತ್ತು ಭಾನುವಾರ ಶಿಕ್ಷಕರು ಹಾಜರಾಗಬೇಕು ಎಂದು ತಿಳಿಸಲಾಗಿತ್ತು. (ಏಜೆನ್ಸೀಸ್​)

    ವಿಮಾನದ ಮಧ್ಯದ ಸೀಟಿನಲ್ಲಿ ಯಾರೂ ಕೂರುವಂತಿಲ್ಲ; ಕರೊನಾ ತಡೆಗಾಗಿ ಹೆಚ್ಚಿದ ಸುರಕ್ಷತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts