More

    ಮಹಿಳೆಯರ ಸ್ವಾವಲಂಬನೆಗೆ ಸರ್ಕಾರ ಮುಂದಾಗಲಿ ಎಂದ ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ ಸಾಹಿರಾ ಬಾನು

    ಹಗರಿಬೊಮ್ಮನಹಳ್ಳಿ: ಬದುಕಿನ ಎಲ್ಲ ಜವಾಬ್ದಾರಿಗಳನ್ನು ನಿಸ್ವಾರ್ಥದಿಂದ ನಿಭಾಯಿಸುವವಳು ಹೆಣ್ಣು ಮಗಳು ಎಂದು ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ ಸಾಹಿರಾ ಬಾನು ಹೇಳಿದರು.

    ಪಟ್ಟಣದ ಸೋನಿಯಾ ನಗರದಲ್ಲಿ ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸಲು ಸರ್ಕಾರಗಳು ಗಮನಹರಿಸಬೇಕು. ಅಲ್ಲದೇ ಸಾಮಾಜಿಕ, ರಾಜಕೀಯವಾಗಿ ಮಹಿಳೆಯರನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.

    ಗರ್ಭಿಣಿಯರಾದ ಸಿಂಧು, ರಜಿಯಾ, ಜ್ಯೋತಿ, ಪವಿತ್ರಾ, ಶಮಿಮ್, ಲಕ್ಷ್ಮೀ, ಮಾಬುನ್ನಿ, ಭಾರತಿ, ಸುಜಾತಾ, ಮಂಜುಳಾಗೆ ಉಡಿ ತುಂಬಲಾಯಿತು. ಶುಶ್ರೂಷಕಿ ಮಂಜುಳಾ, ಮುಖಂಡರಾದ ಪದ್ದಮ್ಮ, ಹೊನ್ನಮ್ಮ, ಬಿ.ಬಾನಮ್ಮ, ಸಫರಾ ಬಾಬುವಲಿ, ಬಾಳಮ್ಮ, ಶಿಗೇನಹಳ್ಳಿ ರಜೀಯಾ ಬೇಗಂ, ತೇಜಸ್ವಿನಿ, ರೇಷ್ಮಾ, ನಜ್ಮಾ, ಆಶಾಬೇಗಂ, ಅಂಗನವಾಡಿ ಕಾರ್ಯಕರ್ತೆ ಮಾರೆಕ್ಕ, ಶೈಲಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts