More

    ದೇವಸ್ಥಾನದ ಅಕ್ರಮ ಆಸ್ತಿ ಪರಭಾರೆ ತಡೆಯಿರಿ

    ಹಗರಿಬೊಮ್ಮನಹಳ್ಳಿ: ರಾಮನಗರ ಪಾದಗಟ್ಟೆ ಆಂಜನೇಯ ದೇಗುಲದ 11.43 ಎಕರೆ ಕೃಷಿಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ರದ್ದುಗೊಳಿಸಲು ಆಗ್ರಹಿಸಿ ನಾಣಿಕೇರಿ ದೈವಸ್ಥರು ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ಗೆ ಬುಧವಾರ ಮನವಿ ಸಲ್ಲಿಸಿದರು.

    ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ರದ್ದುಗೊಳಿಸಿ

    ಕಳೆದ 60 ವರ್ಷಗಳ ಹಿಂದೆ ತುಂಗಭದ್ರಾ ಆಣೆಕಟ್ಟು ನಿರ್ಮಾಣದ ವೇಳೆ ಯೋಜನಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ ರಾಮನಗರದಲ್ಲಿರುವ ಪಾದಗಟ್ಟೆ ಆಂಜನೇಯ ದೇಗುಲದ ಕೃಷಿ ಭೂಮಿ ಏಕಾಏಕಿ ಗಂಗಾವತಿ ವಿಜಯಕುಮಾರ ಎಂಬುವರ ಹೆಸರಿಗೆ ಅಕ್ರಮವಾಗಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕೂಡಲೇ ಪರಿಶೀಲಿಸಿ ಆಸ್ತಿ ಬದಲಾವಣೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು. ದೇಗುಲದ ಆಸ್ತಿ ಮರಳಿ ದೇವಸ್ಥಾನಕ್ಕೆ ನೀಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.

    ಇದನ್ನೂ ಓದಿ: ಭಾರತದಲ್ಲಿ ಚಾಕೊಲೇಟ್‌ಗೆ ಹೆಚ್ಚಿದ ಬೇಡಿಕೆ…ಅಬ್ಬೋ, ಇವುಗಳ ಬೆಲೆ ಕಾರ್ಮಿಕರ ಒಂದು ತಿಂಗಳ ಸಂಬಳವಾಗಿದೆ!

    ದೇಗುಲದ ಹೆಸರಿನಲ್ಲಿ 1958 ರಿಂದ 2023 ಆಗಷ್ಟ್ 7 ರವರೆಗೆ ಇದೆ. ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕು. ತಾಲೂಕಿನ ಕಡ್ಲಬಾಳು ಗ್ರಾಪಂ ವ್ಯಾಪ್ತಿಯ ಪಟ್ಟಣದ ಸರ್ಕ್ಯುಟ್ ಹೌಸ್ ಬಳಿಯಿರುವ ಸರ್ವೇ ನಂ. 793, 8.54 ಎಕರೆ ಮತ್ತು ಸರ್ವೇ ನಂ. 799 ರ 2.89 ಎಕರೆ ಸೇರಿದಂತೆ ಒಟ್ಟು 11.43 ಎಕರೆ ಕೃಷಿ ಭೂಮಿ ಪರಭಾರೆಯಾಗಿದೆ ಎಂದು ನಾಣಿಕೇರಿ ಸಮಿತಿ ಅಧ್ಯಕ್ಷ ಬಾರಿಕರ ಬಾಪೂಜಿ ದೂರಿದರು.
    ಸ್ಥಳೀಯ ನಿವಾಸಿ ಹುಳ್ಳಿ ಪ್ರಕಾಶ್ ಮಾತನಾಡಿ, ಧರ್ಮಕರ್ತ ವೆಂಕೋಬಣ್ಣ ಶೆಟ್ಟಿ ದೇವಸ್ಥಾನದ ಕೃಷಿ ಭೂಮಿಯ ಪಹಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಪೌತಿ ಆಧಾರದಲ್ಲಿ ಗಂಗಾವತಿ ವಿಜಯಕುಮಾರ ತಂದೆ ವೆಂಕೋಬಣ್ಣ ಶೆಟ್ಟಿ ಹೆಸರಿನಲ್ಲಿ ಅಕ್ರಮವಾಗಿ ಹಕ್ಕು ಬದಲಾವಣೆಯಾಗಿದೆ. ಇದೊಂದು ಕಾನೂನು ಬಾಹಿರ ಅತಿಕ್ರಮಣ ಎಂದು ಆರೋಪಿಸಿದರು.

    ಸಮಿತಿ ಕಾರ್ಯದರ್ಶಿ ಸೆರೆಗಾರ ಹುಚ್ಚಪ್ಪ, ಪುರಸಭೆ ಸದಸ್ಯರಾದ ಕೆ.ಎಂ.ನವೀನ್, ಜೋಗಿ ಹನುಮಂತ, ಪ್ರಮುಖರಾದ ಅರಸಿಕೇರಿ ಹನುಮಂತಪ್ಪ, ಸಿ.ಎಂ.ರಾಮಣ್ಣ, ಎಚ್.ಪಿ.ಶಿವಶಂಕರಗೌಡ, ಸರ್ದಾರ್ ಅಂಬಣ್ಣ, ಬಡಿಗೇರ ಬಸವರಾಜ, ಕುದರಿ ಬಸವರಾಜ, ಮುಗಲಿ ಶ್ರೀನಿವಾಸ, ಬಂಗಾರಿ ಗಾಳಿರಾಜ, ಬಂಟ್ರ ಹುಲುಗಪ್ಪ, ಬಡಲಡಿಕಿ ಕೃಷ್ಣಪ್ಪ, ಸೋಮು ಗಾಂಧಿ, ರಾಚಣ್ಣನವರ ಸಣ್ಣ ಹುಚ್ಚಪ್ಪ, ಭಂಟ್ರ ಗಾಳೆಪ್ಪ, ಆಗಸರ ಕೊಟ್ರೇಶ್, ಪ್ಲಂಬರ್ ಮಾರುತಿ, ಕುದರಿ ಮಿಥುನ್, ರಾಮನಗೌಡ, ಬೆಂಕಿಸ್ವಾಮಿ, ಚಿಗರಿ ಮಾರುತಿ, ಹನುಮೇಶಿ, ಜೋಗಿ ನಾಗರಾಜ, ಸರ್ದಾರ್ ಜೀವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts