More

    ಬಯಲು ಶೌಚ ವಿರುದ್ಧ ಸೈಕಲ್ ಜಾಥಾ: ಹಬೊಹಳ್ಳಿಯಲ್ಲಿ ಯುವಕ ವೀರೇಶರಿಂದ ಜನಜಾಗೃತಿ

    ಹಗರಿಬೊಮ್ಮನಹಳ್ಳಿ: ಬಯಲು ಶೌಚಮುಕ್ತ ಹಾಗೂ ಸುತ್ತ್ತಲಿನ ಪರಿಸರ ಸ್ವಚ್ಛವಿಟ್ಟುಕೊಳ್ಳುವಂತೆ ಜನ ಜಾಗೃತಿ ಮೂಡಿಸಲು ಯುವಕ ವೀರೇಶ್ ಸೈಕಲ್ ಜಾಥಾ ಆರಂಭಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪಟ್ಟಣದ ಹಳೇ ಊರಿನ ನಿವಾಸಿಯಾದ ವೀರೇಶ, ಸೈಕಲ್‌ಗೆ ನಾಮಫಲಕ ಹಾಗೂ ಶೌಚಗೃಹ ಪ್ರಾತ್ಯಕ್ಷಿತೆ ರಚಿಸಿ ಸಾರ್ವಜನಿಕರಿಗೆ ನೈರ್ಮಲ್ಯ ಕರಪತ್ರ ಹಂಚುತ್ತಾ ಮೈಕ್‌ನಲ್ಲಿ ಪರಿಸರ ಸಂಬಂಧಿತ ಸಂದೇಶ ಸಾರುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

    ಬಯಲು ಬಹಿರ್ದೆಸೆಗೆ ತೆರಳದಂತೆ ಸರ್ಕಾರಗಳು ಶೌಚಗೃಹ ನಿರ್ಮಿಸಿಕೊಳ್ಳಲು ಅನೇಕ ಯೋಜನೆ ತಂದರೂ ಸದ್ಬಳಕೆ ಮಾಡಿಕೊಳ್ಳದಿರುವುದು ಶೋಚನೀಯ. ಬಯಲು ಶೌಚದಿಂದ ಪರಿಸರ ಹಾಗೂ ಆರೋಗ್ಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಹಳ್ಳಿ ಹಳ್ಳಿಗೆ ತೆರಳಿ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ಸೈಕಲ್ ಜಾಥಾಕ್ಕೆ ಮುಂದಾಗಿದ್ದೇನೆ. ಪ್ರತಿ ದಿನ ಬೆ.7 ರಿಂ 9 ಗಂಟೆಯವರೆಗೆ ಎರಡು ತಾಸು ಜಾಗೃತಿ ಮೂಡಿಸುತ್ತೇನೆ ಎನ್ನುತ್ತಾರೆ ವೀರೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts