More

    ಗಣತಿ ಕಾರ್ಯ ಆರಂಭಿಸಿ ಪುನರ್ವಸತಿ ಕಲ್ಪಿಸುವಂತೆ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ಆಗ್ರಹ

    ಹಗರಿಬೊಮ್ಮನಹಳ್ಳಿ: ದೇವದಾಸಿ ಮಹಿಳೆಯರ ಹಾಗೂ ಅವರ ಕುಟುಂಬದ ಸದಸ್ಯರ ಗಣತಿಯನ್ನು ನಡೆಸಿ ಪುನರ್ವಸತಿಗೆ ಕ್ರಮವಹಿಸುವಂತೆ ಒತ್ತಾಯಿಸಿ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ.ಶರಣಮ್ಮರಿಗೆ ಶನಿವಾರ ಮನವಿ ಸಲ್ಲಿಸಿದರು.

    ಬಳಿಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಾದ್ಯಂತ ದೇವದಾಸಿ ಮಹಿಳೆಯರನ್ನು, ಅವರ ಕುಟುಂಬದ ಸದಸ್ಯರನ್ನು ಗಣತಿ ಕಾರ್ಯ ಆರಂಭಿಸಬೇಕು. ಎಲ್ಲಾ ದೇವದಾಸಿ ಮಹಿಳೆಯರಿಗೆ ಮಾಸಿಕ 5 ಸಾವಿರ ರೂಗಳ ಸಹಾಯ ಧನವನ್ನು ಕೇಂದ್ರ ಸರ್ಕಾರದಿಂದ ಒದಗಿಸಬೇಕು ಕೃಷಿಯಲ್ಲಿ ಇಚ್ಛಿಸುವ ಮಹಿಳೆ ಮತ್ತು ಕುಟುಬಂದವರಿಗೆ ತಲಾ 5 ಎಕರೆ ಜಮೀನು ಮತ್ತು ವಾಸಕ್ಕೆ ಹಿತ್ತಲು ಸಹಿತ ನಿವೇಶನವನ್ನು ನೀಡಿ ಮನೆ ನಿರ್ಮಿಸಿಕೊಡಬೇಕು. ಸ್ವಉದ್ಯೋಗದಲ್ಲಿ ತೊಡಗಿದರೇ ತರಬೇತಿ ಸಹಿತ ಸಹಾಯಧನದ ಸಾಲಗಳನ್ನು ನೀಡಬೇಕು. ಸರ್ಕಾರ ದೇವದಾಸಿ ಮಕ್ಕಳನ್ನು ದತ್ತು ಪಡೆದು ಅಗತ್ಯ ಶಿಕ್ಷಣ ನೀಡಿ ಉದ್ಯೋಗ ಕಲ್ಪಿಸಬೇಕು. ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ನಿಗಧಿಪಡಿಸಬೇಕು. ಖಾತ್ರಿ ಯೋಜನೆಯಲ್ಲಿ 200 ಮಾನದ ದಿನಗಳನ್ನು ಸೃಜಿಸಬೇಕು. ಎಸ್ಸಿ, ಎಸ್ಟಿ ಜನರ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸುವ ಶಾಸನ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.

    ಈ ವೇಳೆ ತಾಲೂಕು ಅಧ್ಯಕ್ಷ ಬಿ.ಮೈಲಮ್ಮ, ಕಾರ್ಯದರ್ಶಿ ಪಿ.ಚಾಂದಬೀ, ಪ್ರಮುಖರಾದ ಬಸಮ್ಮ, ಜಾನಕಮ್ಮ, ಲಕ್ಷ್ಮಮ್ಮ, ದುರುಗಮ್ಮ, ಎಚ್.ಬಸಮ್ಮ, ಗಂಗಮ್ಮ, ಹುಚ್ಚೆಂಗಮ್ಮ, ಗೋಣೆಮ್ಮ, ಹನುಮಕ್ಕ, ಸಿಪಿಐಎಂ ಮುಖಂಡ ಎಸ್.ಜಗನ್ನಾಥ ಸೇರಿದಂತೆ ಉಪತಹಸೀಲ್ದಾರ ವಿಶ್ವೇಶರಯ್ಯ, ಅನ್ನದಾನೇಶ್ವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts