More

    ದೂರು ನಿರ್ಲಕ್ಷಿೃಸಿದ ಅಧಿಕಾರಿಗಳ ವಜಾಗೊಳಿಸುವಂತೆ ಅಖಿಲ ಭಾರತ ಯುವಜನ ಫೆಡೆರೇಷನ್ ಆಗ್ರಹ

    ಹಗರಿಬೊಮ್ಮನಹಳ್ಳಿ: ಉತ್ತರ ಪ್ರದೇಶದ ಹಾಥರಸ್‌ನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡೆರೇಷನ್ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಶಿವಕುಮಾರಗೌಡಗೆ ಬುಧವಾರ ಮನವಿ ಸಲ್ಲಿಸಿದರು.

    ಸಂಘಟನೆಯ ತಾಲೂಕು ಅಧ್ಯಕ್ಷ ಯರ‌್ರಿಸ್ವಾಮಿ ಭಜಂತ್ರಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬಿಳಿಳಿಸಿದೆ. ಪ್ರಕರಣವನ್ನು ಪ್ರಭಾವಿಗಳಿಂದ ಮುಚ್ಚಿಹಾಕುವ ಯತ್ನ ನಡೆದಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಯುಪಿ ಸರ್ಕಾರ ವಿಫಲವಾಗಿದೆ. ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಿ ನೊಂದ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಜತೆಗೆ ದೂರು ನೀಡಿದ ಬಳಿಕ ನಿರ್ಲಕ್ಷ್ಯ ವಹಿಸಿರುವ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

    ಸಂಘಟನೆಯ ಕಾರ್ಯದರ್ಶಿ ಬಿ.ರವಿ ಕುಮಾರ್, ಮುಖಂಡರಾದ ಎಸ್.ಅನ್ವರ್ ಬಾಷಾ, ಕೆ.ರವಿಚಂದ್ರ, ಜಿ.ವಿ.ಶಿವಕುಮಾರ್, ಸಂದೀಪ, ಮುಸ್ತಾಕ್,ಎಚ್.ಮೈಲಪ್ಪ, ಕೆ.ಗಾದಿಲಿಂಗಪ್ಪ, ಬಿ.ಚಂದ್ರು, ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts