More

    ಮರ್ಯಾದಾ ಹತ್ಯೆಯ ಆರೋಪಿ ಮಾರುತಿ ರಾವ್ ಶವ ಸಿಕ್ಕ ಬೆನ್ನಲ್ಲೇ ಮಗಳು ಅಮೃತಾಳಿಂದ ಹೊರಬಿತ್ತು ಒಂದು ವಿಷಯ; ಪ್ರಣಯ್​ ಸಾವಿನ ಬಳಿಕ ಆಕೆ ಮಾಡಿದ್ದೇನು?

    ಹೈದರಾಬಾದ್​: 2018ರಲ್ಲಿ ಹೈದರಾಬಾದ್​ನಲ್ಲಿ ನಡೆದಿದ್ದ ಭೀಕರ ಮರ್ಯಾದಾ ಹತ್ಯೆ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಇಂದು ಪ್ರಮುಖ ಆರೋಪಿ ಮಾರುತಿ ರಾವ್​ ಮೃತದೇಹ ಖೈರತಾಬಾದ್​ನ ಆರ್ಯ ವೈಶ್ಯ ಭವನದ ಕೊಠಡಿ ಸಂಖ್ಯೆ306ರಲ್ಲಿ ಪತ್ತೆಯಾಗಿದೆ.

    ಮಗಳು ಅಮೃತಾಳನ್ನು ಮದುವೆಯಾಗಿದ್ದ ಪ್ರಣಯ್​ನನ್ನು ಆತ ದಲಿತ ಸಮುದಾಯಕ್ಕೆ ಸೇರಿದವ ಎಂಬ ಕಾರಣಕ್ಕೆ ಮಾರುತಿ ರಾವ್​ 1 ಕೋಟಿ ರೂಪಾಯಿ ಸುಫಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿತ್ತು. ಆಗ ಅಂದರೆ 2018ರ ಸೆಪ್ಟೆಂಬರ್​ನಲ್ಲಿ ಗರ್ಭಿಣಿಯಾಗಿದ್ದ ಅಮೃತಾಳ ಎದುರೇ ಆಕೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಪ್ರಣಯ್​ನನ್ನು ಬರ್ಬರವಾಗಿ ಕೊಲ್ಲಲಾಗಿತ್ತು.

    ಈ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೆನಿಸಿಕೊಂಡಿದ್ದ ಮಾರುತಿ ರಾವ್​ ಮೃತದೇಹ ಪತ್ತೆಯಾದ ಬೆನ್ನಲ್ಲೇ ಆತನ ಮಗಳು, ಮೃತ ಪ್ರಣಯ್​ ಪತ್ನಿ ಅಮೃತಾ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

    ಪ್ರಣಯ್​ ಹತ್ಯೆ ಆದಾಗಿನಿಂದಲೂ ನಾನು ನನ್ನ ತಂದೆಯೊಂದಿಗೆ ಮಾತನಾಡಿಲ್ಲ. ಅವರ ಸಂಪರ್ಕವನ್ನೇ ಕಡಿದುಕೊಂಡಿದ್ದೆ ಎಂಬ ವಿಷಯವನ್ನು ತಿಳಿಸಿದ್ದಾರೆ.

    ಮಾರುತಿ ರಾವ್​ ಮೃತದೇಹ ಪತ್ತೆಯಾದ ಬಗ್ಗೆ ನನಗೂ ಸರಿಯಾದ ಮಾಹಿತಿ ಗೊತ್ತಿಲ್ಲ. ಏನಾಗಿರಬಹುದು ಎಂಬ ಅನುಮಾನ ನಮಗೂ ಕಾಡುತ್ತಿದೆ. ಮಾಧ್ಯಮಗಳ ಮೂಲಕವಷ್ಟೇ ಆತನ ಸಾವಿನ ಸುದ್ದಿ ನಮಗೆ ತಿಳಿಯಿತು. ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ ನಾವು ಹೆಚ್ಚೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

    ಪ್ರಣಯ್​ ಹತ್ಯೆಯಾದ ಬಳಿಕ ಅಮೃತಾ, ಯಾವ ಕಾರಣಕ್ಕೂ ತವರು ಮನೆಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ಪ್ರಣಯ್​ ಕುಟುಂಬದ ಜತೆಗೇ ಇದ್ದರು. 2019ರ ಜನವರಿಯಲ್ಲಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
    ಪ್ರಕರಣಕ್ಕೆ ಸಂಬಂಧಪಟ್ಟಂತೆ 2019ರ ಜೂನ್​ನಲ್ಲಿ ಪೊಲೀಸರು ಮಾರುತಿ ರಾವ್​ ಸೇರಿ ಒಟ್ಟು ಏಳು ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದರು. ಸದ್ಯ ಮಾರುತಿ ರಾವ್ ಮೃತದೇಹ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. (ಏಜೆನ್ಸೀಸ್)

    ತೆಲಂಗಾಣ ಮರ್ಯಾದೆ ಹತ್ಯೆಯ ಪ್ರಮುಖ ಆರೋಪಿ, ಅಮೃತಾ ರಾವ್​ ತಂದೆ ಮಾರುತಿ ರಾವ್​ ಶವವಾಗಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts