More

    ನಿಮ್ಮ ಈ ಅಭ್ಯಾಸಗಳು ಮೆದುಳಿನ ಸಾಮರ್ಥ್ಯವನ್ನೇ ಹಾಳು ಮಾಡಿಬಿಡುತ್ತವೆ ಎಚ್ಚರ!

    ಮೆದುಳು ನಮ್ಮ ನೆನಪುಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ನಿಯಂತ್ರಿಸುವ ಅದ್ಭುತ ಅಂಗವಾಗಿದೆ. ಮಾನವನ ದೇಹದಲ್ಲಿ ಇದು ಅತ್ಯಂತ ಮುಖ್ಯವಾಗಿದೆ. ಆದರೆ, ನಮ್ಮ ದೈನಂದಿನ ಜೀವನಶೈಲಿಯಲ್ಲಿ ನಾವು ತಿಳಿಯದೆ ಈ ಅಮೂಲ್ಯವಾದ ಅಂಗವನ್ನು ಅಪಾಯಕ್ಕೆ ದೂಡುತ್ತಿದ್ದೇವೆ. ತಂತ್ರಜ್ಞಾನದಿಂದಾಗಿ ನಮ್ಮ ಜೀವನಶೈಲಿ ಬದಲಾಗಿರುವುದೇನೋ ನಿಜ ಆದರೆ, ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿರುವುದು ಕೂಡ ಅಷ್ಟೇ ಸತ್ಯ.

    ಅಧ್ಯಯನವೊಂದರ ಪ್ರಕಾರ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ದೈಹಿಕ ಆರೋಗ್ಯ ಮತ್ತು ಉತ್ತಮ ಮೆಮೊರಿಗಾಗಿ ವ್ಯಾಯಾಮ ಮುಖ್ಯವಾಗಿದೆ. ನಮ್ಮ ಬಿಡುವಿಲ್ಲದ ಜೀವನದಲ್ಲಿ ನಾವು ಸಾಮಾನ್ಯವಾಗಿ ನಿದ್ರೆಯ ಮೌಲ್ಯವನ್ನು ಮರೆತುಬಿಡುತ್ತೇವೆ. ನಿದ್ರೆಯ ಕೊರತೆಯು ಅರಿವಿನ ಸಾಮರ್ಥ್ಯಗಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಮೆಮೊರಿ, ತಾರ್ಕಿಕತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧನೆ ಹೇಳಿದೆ.

    ಮಲಗುವ ಒಂದು ಗಂಟೆ ಮೊದಲು ಆಲ್ಕೋಹಾಲ್ ಸೇವಿಸಬೇಡಿ. ಕೆಫೀನ್ ಅನ್ನು ತಪ್ಪಿಸುವುದು ಮತ್ತು ನೀಲಿ ಬೆಳಕನ್ನು ಕಡಿಮೆ ಮಾಡುವುದರಿಂದ ಮೆದುಳನ್ನು ಆರೋಗ್ಯವಾಗಿಡಬಹುದು. ನೀರು ಕೂಡ ಮೆದುಳಿನ ಆರೋಗ್ಯದ ಪ್ರಮುಖ ಅಂಶವಾಗಿದೆ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಇದನ್ನು ಹೆಚ್ಚಾಗಿ ಮರೆತುಬಿಡುತ್ತೇವೆ. ನಿರ್ಜಲೀಕರಣವು ನಮ್ಮ ಮೆದುಳಿನ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮ ಮೆದುಳಿನ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯಿರಿ, ವಿಶೇಷವಾಗಿ ದೈಹಿಕ ಚಟುವಟಿಕೆಯ ಮೊದಲು ಮತ್ತು ನಂತರ ನೀರು ಕುಡಿಯುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ.

    ಅಂದಹಾಗೆ ಬೆಳಗಿನ ಉಪಾಹಾರ ಕೂಡ ಮೆದುಳಿಗೆ ಅಗತ್ಯವಾದ ಪ್ರಮುಖ ಶಕ್ತಿಯನ್ನು ನೀಡುತ್ತದೆ. ಬೆಳಗಿನ ಉಪಾಹಾರವನ್ನು ತ್ಯಜಿಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳೊಂದಿಗೆ ಸಮತೋಲಿತ ಉಪಹಾರವನ್ನು ಆಯ್ಕೆ ಮಾಡುವುದರಿಂದ ನಿಮ್ಮ ಮೆದುಳನ್ನು ಆರೋಗ್ಯಕರವಾಗಿ ಇರಿಸಬಹುದು.

    ಸಂಗೀತವು ನಮಗೆ ಸಂತೋಷವನ್ನು ನೀಡುತ್ತದೆಯಾದರೂ, ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೋರಾಗಿ ಸಂಗೀತವನ್ನು ಕೇಳಬೇಡಿ. ಇದು ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಎಚ್ಚರವಹಿಸಿದರೆ ಉತ್ತಮ ಮೆದುಳಿನ ಆರೋಗ್ಯವೂ ನಿಮ್ಮದಾಗುತ್ತದೆ. (ಏಜೆನ್ಸೀಸ್​)

    ಬಾಲರಾಮನ ವಿಶ್ರಾಂತಿಗೆ ಪ್ರತಿದಿನ 1 ಗಂಟೆ ಮೀಸಲು: ಇನ್ಮುಂದೆ ಈ ಅವಧಿಯಲ್ಲಿ ರಾಮಮಂದಿರ ಬಾಗಿಲು ಬಂದ್​

    ನನ್ನಿಂದ ಮೈಕ್ರೋಸಾಫ್ಟ್​ನಲ್ಲಿ ಜಾಬ್​ ಸಿಕ್ತು ಆದ್ರೆ ನಾನಿನ್ನೂ ನಿರುದ್ಯೋಗಿ! ಕೈಕೊಟ್ಟ ಯುವತಿ, ಕಣ್ಣೀರಿಟ್ಟ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts