More

    ಜಿಮ್ಸ್​ನಲ್ಲಿವೆ ಅತಿಹೆಚ್ಚು ವೆಂಟಿಲೇಟರ್

    ಗದಗ: ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಜಿಮ್ಸ್) 110 ವೆಂಟಿಲೇಟರ್​ಗಳನ್ನು ಹೊಂದಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ವೆಂಟಿಲೇಟರ್ ಹೊಂದಿದ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ.

    ಜಿಮ್ಸ್​ ಆಸ್ಪತ್ರೆಯಲ್ಲಿ 440 ಆಕ್ಸಿಜನ್ ಬೆಡ್ ಹೊಂದಿದ್ದು, ಇದರಲ್ಲಿ 110 ವೆಂಟಿಲೇಟರ್ ಬೆಡ್​ಗಳಿವೆ. ರಾಜ್ಯದ ದೊಡ್ಡ ಆಸ್ಪತ್ರೆಗಳು 100 ವೆಂಟಿಲೇಟರ್​ಗಳನ್ನು ಹೊಂದಿವೆ. ವೆಂಟಿಲೇಟರ್​ಗಳು ಹೆಚ್ಚಾಗಿರುವುದರಿಂದ ಗದಗ ಜಿಲ್ಲೆಯಷ್ಟೆ ಅಲ್ಲದೆ, ಪಕ್ಕದ ಧಾರವಾಡ, ಕೊಪ್ಪಳ, ಬಾಗಲಕೋಟೆ, ಹಾವೇರಿ ಜಿಲ್ಲೆಯ ರೋಗಿಗಳು ಸಹ ಇಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶೇ. 99ರಷ್ಟು ಜನರು ಗುಣವಾಗಿದ್ದಾರೆ. ಹುಬ್ಬಳ್ಳಿ ಕಿಮ್್ಸ ನಂತರ ಗದಗ ಜಿಮ್ಸ್​ಅತ್ಯುತ್ತಮ ಆಸ್ಪತ್ರೆ ಎಂಬ ಕೀರ್ತಿ ಬಂದಿದೆ ಎನ್ನುತ್ತಾರೆ ವೈದ್ಯರು.

    ಜಿಲ್ಲೆಯಲ್ಲಿ 5 ತಾಲೂಕು ಆಸ್ಪತ್ರೆಗಳು, 2 ಸಮುದಾಯ ಆಸ್ಪತ್ರೆಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಮೊದಲು ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತಂತ್ರಜ್ಞರ ಕೊರತೆಯಿಂದ ಎಲ್ಲ ವೆಂಟಿಲೇಟರ್​ಗಳನ್ನು ಜಿಮ್ಸ್​ನಲ್ಲಿ ಅಳವಡಿಸಲಾಯಿತು. ಜಿಮ್ಸ್​ನಲ್ಲಿ ಮೊದಲು ಕೇವಲ 64 ವೆಂಟಿಲೇಟರ್​ಗಳಿದ್ದವು. ಕರೊನಾ ಸೋಂಕು ಹೆಚ್ಚಾದ ಮೇಲೆ ವೆಂಟಿಲೇಟರ್​ಗಳ ಬೇಡಿಕೆ ಹೆಚ್ಚಾಯಿತು. ಕಳೆದ ನಾಲ್ಕಾರು ದಿನಗಳ ಹಿಂದೆ ಜಿಮ್ಸ್​ನಲ್ಲಿ ಒಂದೊಂದು

    ವೆಂಟಿಲೇಟರ್​ಗೆ 15-20 ಸೋಂಕಿತರ ಸರದಿ ಇತ್ತು. 110 ವೆಂಟಿಲೇಟರ್​ಗಳಿದ್ದರೂ ಸೋಂಕಿತರಿಗೆ ವೆಂಟಿಲೇಟರ್ ನೀಡುವುದು ಕಷ್ಟಸಾಧ್ಯವಾಯಿತು. ಕೆಲವರನ್ನು ಆಕ್ಸಿಜನ್​ಬೆಡ್​ನಲ್ಲಿಯೇ ಚಿಕಿತ್ಸೆ ನೀಡಿ ರೋಗಿಗಳನ್ನು ಗುಣಪಡಿಸಲಾಯಿತು. ಇದೀಗ ಸೋಂಕಿನ ಪ್ರಮಾಣ ಗಮನಾರ್ಹ ಕುಸಿತ ಕಂಡಿದ್ದರಿಂದ ವೆಂಟಿಲೇಟರ್​ಗಳ ಬೇಡಿಕೆ ಇಲ್ಲದಾಗಿದೆ. ವೆಂಟಿಲೇಟರ್ ಅವಲಂಬಿತ ಸಾಕಷ್ಟು ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿವರಿಸುತ್ತಾರೆ ವೈದ್ಯರು.

    ಎಲ್ಲೆಲ್ಲಿ ಎಷ್ಟು?: ಗದಗ ಜಿಮ್ಸ್​ನಲ್ಲಿ 110, ಬೆಂಗಳೂರಿನ ಬಿಎಂಆರ್​ಸಿಎಲ್ ಆಸ್ಪತ್ರೆ 100, ಹಾಸನ ಹಿಮ್್ಸ 100, ಹುಬ್ಬಳ್ಳಿ ಕಿಮ್್ಸ 100 ವೆಂಟಿಲೇಟರ್ ಗಳಿವೆ. ಇದನ್ನು ಬಿಟ್ಟರೆ ರಾಜ್ಯದ ಉಳಿದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನೂರರ ಒಳಗೆ ವೆಂಟಿಲೇಟರ್​ಗಳಿವೆ ಎಂಬುದು ವಿಶೇಷ.

    ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್) 110 ವೆಂಟಿಲೇಟರ್​ಗಳಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ವೆಂಟಿಲೇಟರ್ ಹೊಂದಿದ ಆಸ್ಪತ್ರೆ ಎಂಬ ಗೌರವ ಜಿಮ್ಸ್ ಗಿದೆ. ವಾರದ ಹಿಂದೆ ವೆಂಟಿಲೇಟರ್ ಅವಲಂಬಿತರ ಸಂಖ್ಯೆ ಹೆಚ್ಚು ಇತ್ತು. ಆದರೆ, ಇದೀಗ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವೆಂಟಿಲೇಟರ್ ಬೇಡಿಕೆಯೂ ಕಡಿಮೆಯಾಗಿದೆ. ಸದ್ಯ ಅವಶ್ಯಕತೆ ಇರುವ ಎಲ್ಲರಿಗೂ ವೆಂಟಿಲೇಟರ್ ಆವಳವಡಿಸಲಾಗಿದೆ. ಉಳಿದವರನ್ನು ಆಕ್ಸಿಜನ್ ಬೆಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    | ಡಾ. ಪಿ.ಎಸ್.ಭೂಸರಡ್ಡಿ, ನಿರ್ದೇಶಕರು, ಜಿಮ್ಸ್, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts