More

    ಜ್ಞಾನವಾಪಿ ಮಸೀದಿ ಒಳಗಿರುವ ವಾಝುಖಾನ ಟ್ಯಾಂಕ್ ಸ್ವಚ್ಛತೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಸುಪ್ರೀಂಕೋರ್ಟ್​

    ನವದೆಹಲಿ: ರಾಮ ಮಂದಿರದ ಉದ್ಘಾಟನೆಗೆ ಕಾಯುತ್ತಿರುವ ಕೋಟ್ಯಾಂತರ ಹಿಂದುಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಗ್ರೀನ್​ ಸಿಗ್ನಲ್​ ಕೊಟ್ಟಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಮಸೀದಿಯ ಒಳಗಡೆ ಇರುವ 2022ರ ಮೇ ತಿಂಗಳಿಂದಲೂ ಮುಚ್ಚಿರುವ “ವಾಝುಖಾನ ಟ್ಯಾಂಕ್” ಸ್ವಚ್ಛಗೊಳಿಸಲು ಸುಪ್ರೀಂಕೋರ್ಟ್​ ಇಂದು (ಜ.16) ಅನುಮತಿ ನೀಡಿದೆ.​

    ತೀರ್ಪು ಪ್ರಕಟಿಸಿದ ಉನ್ನತ ನ್ಯಾಯಾಲಯ, ವಾಝುಖಾನ ಟ್ಯಾಂಕ್​ ಸ್ವಚ್ಛತಾ ಪ್ರಕ್ರಿಯೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಮೇಲ್ವಿಚಾರಣೆಯಲ್ಲಿ ನಡೆಯಬೇಕೆಂದು ಹೇಳಿದೆ.

    ವಾಝುಖಾನ ಒಂದು ಕೊಳವಾಗಿದ್ದು, ನಮಾಜ್​ ಮಾಡುವ ಮುನ್ನ ಮುಸ್ಲಿಂರು ಸ್ನಾನ ಮಾಡಲು ಬಳಸುತ್ತಿದ್ದರು. ಹೀಗಿರುವಾಗ 2022ರ ಮೇ 16ರಂದು ಕೊಳದಲ್ಲಿ ರಚನೆಯೊಂದು ಪತ್ತೆಯಾಯಿತು. ಈ ರಚನೆಯನ್ನು ಹಿಂದು ಸಂಘಟನೆಯವರು ಶಿವಲಿಂಗ ಎಂದು ವಾದಿಸಿದರೆ, ಮುಸ್ಲಿಮರು ನೀರಿನ ಕಾರಂಜಿ ಎಂದು ಪ್ರತಿಪಾದಿಸಿದರು. ಸಮೀಕ್ಷೆ ಮಾಡಲು ಅನುಮತಿ ನೀಡಿದ ಸಮಯದಲ್ಲೇ ಈ ರಚನೆ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಪತ್ತೆಯಾಗಿತ್ತು.

    ವಾಝುಖಾನ ಟ್ಯಾಂಕ್​ ಸ್ಥಳದಲ್ಲಿ ಸಾಕಷ್ಟು ಕೊಳೆ ತುಂಬಿಕೊಂಡಿದ್ದು, ಸಾಕಷ್ಟು ಮೀನುಗಳು ಕೂಡ ಮೃತಪಟ್ಟಿವೆ. ಹೀಗಾಗಿ ಕೊಳವನ್ನು ಸ್ವಚ್ಛಗೊಳಿಸುವ ಅವಶ್ಯಕತೆ ಇದೆ ಎಂದು ಈ ವರ್ಷದ ಆರಂಭದಲ್ಲೇ ಹಿಂದು ಸಂಘಟನೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಸ್ವಚ್ಛಗೊಳಿಸಲು ಅನುಮತಿಯನ್ನು ನೀಡಿದೆ.

    ಈ ಬಗ್ಗೆ ಹಿಂದು ಸಂಘಟನೆ ಪರ ವಕೀಲ ವಿಷ್ಣು ಶಂಕರ ಜೈನ್​ ಮಾತನಾಡಿ, ಪ್ರಾರ್ಥನೆ ಸಲ್ಲಿಸಲು ಹೋದ ಹಿಂದುಗಳು ವಾಝುಖಾನ ಸ್ಥಳದಲ್ಲಿ ತುಂಬಾ ಕೊಳಕು ಇದೆ ಎಂದು ದೂರಿದ್ದರು. ನೋಡಲು ಚೆನ್ನಾಗಿ ಕಾಣುತ್ತಿರಲಿಲ್ಲ. ಅಲ್ಲಿಗೆ ಪ್ರಾರ್ಥಿಸಲು ಹೋದವರು ಸತ್ತ ಮೀನುಗಳು ಮತ್ತು ಕೊಳಚೆ ನೀರಿನಿಂದ ತೊಂದರೆ ಅನುಭವಿಸುತ್ತಿದ್ದರು ಎಂದು ಹೇಳಿದ್ದಾರೆ.

    ಅಂದಹಾಗೆ 2022ರ ಮೇ 16ರಂದು ವಿಚಾರಣಾ ನ್ಯಾಯಾಲಯ ವಾಝುಖಾನ ಟ್ಯಾಂಕ್​ ಮುಚ್ಚಲು ಆದೇಶ ನೀಡಿತ್ತು. ಇದಾದ ಮಾರನೇ ದಿನವೇ ಉನ್ನತ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಅಂದಿನಿಂದ ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಹಾಗೇ ಉಳಿದಿದ್ದು, ಯಾವಾಗ ಬೇಕಾದರೂ ತೀರ್ಪು ನೀಡಬಹುದು ಎಂದು ವಿಷ್ಣು ಶಂಕರ್​ ಜೈನ್​ ತಿಳಿಸಿದ್ದಾರೆ.

    ಶಿವಲಿಂಗ ಪತ್ತೆಯಾದ ಜ್ಞಾನವಾಪಿ ಮಸೀದಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಮೊಘಲ್ ದೊರೆ ಔರಗಂಜೇಬ್​ ವಿರುದ್ಧ ಬನಾರಸ್‌ನ ಜಮೀನ್ದಾರರು ಆಗಾಗ ಬಂಡಾಯ ಏಳುತ್ತಿದ್ದರು. ಸ್ಥಳೀಯ ಬ್ರಾಹ್ಮಣರು, ಇಸ್ಲಾಮಿಕ್‌ ಬೋಧನೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರು ಎಂಬ ಕಾರಣಕ್ಕೆ ದೇವಾಲಯವನ್ನು ಕೆಡವಲು ಔರಂಗಜೇಬನು ಆದೇಶಿಸಿದನು ಎಂದು ಚರಿತ್ರೆಯ ಪುಟಗಳಲ್ಲಿ ಕಂಡುಬರುತ್ತದೆ. ಮಸೀದಿಯ ನಿರ್ಮಾಣದ ಸ್ಥಳವು ಕಾಶಿ ವಿಶ್ವನಾಥನ ದೇವಾಲಯವಿದ್ದ ಸ್ಥಳ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮತ್ತು ಇನ್ನಿತರ ಹಿಂದೂ ವಾಸ್ತುಶಿಲ್ಪದ ಕುರುಹುಗಳು ಪತ್ತೆಯಾಗಿವೆ. (ಏಜೆನ್ಸೀಸ್​)

    ಆಂಧ್ರದಲ್ಲಿ ಕಾಂಗ್ರೆಸ್​ ನೂತನ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕ

    ತಾಯಿ-ಮಕ್ಕಳು ಸಂಬಂಧಿಸಿದಂತೆ ಅಸಭ್ಯ ವಿಡಿಯೋ! ತೆಗೆದುಹಾಕಲು ಸಮಯ ಕೋರಿದ ಯೂಟ್ಯೂಬ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts