More

    ಆಂಧ್ರದಲ್ಲಿ ಕಾಂಗ್ರೆಸ್​ ನೂತನ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕ

    ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಬದಲಾವಣೆಗಳನ್ನು ಮಾಡಿದೆ. ವೈಎಸ್ ಶರ್ಮಿಳಾ ಅವರನ್ನು ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇವರು ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ. ಅಲ್ಲಿಗೆ ಆಂಧ್ರದಲ್ಲಿ ‘ಬ್ರದರ್ ವರ್ಸಸ್ ಸಿಸ್ಟರ್’ ನೋಡಬಹುದು. ಅಂದಹಾಗೆ ಆಂಧ್ರಪ್ರದೇಶದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

    ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ ರುದ್ರರಾಜು ಅವರು ಸೋಮವಾರ (ಜನವರಿ 15) ದೆಹಲಿಯಲ್ಲಿ ಪಕ್ಷದ ಹೈಕಮಾಂಡ್‌ಗೆ ರಾಜೀನಾಮೆ ಸಲ್ಲಿಸಿದರು. ನಂತರ ವೈಎಸ್ ಶರ್ಮಿಳಾ ಈ ಸ್ಥಾನ ಅಲಂಕರಿಸಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು.

    ಮೂಲಗಳ ಪ್ರಕಾರ, ರುದ್ರರಾಜು ಅವರು ಆಂಧ್ರಪ್ರದೇಶದಲ್ಲಿ ವೈಎಸ್ ಶರ್ಮಿಳಾ ಅವರನ್ನು ಪಕ್ಷದ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲು ಉತ್ಸುಕರಾಗಿದ್ದಾರೆ ಎಂಬ ಸಿಗ್ನಲ್​​​​ ಸಿಕ್ಕಿತ್ತು. ಗಿಡುಗು ರುದ್ರರಾಜು ಆಂಧ್ರಪ್ರದೇಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಕಾಂಗ್ರೆಸ್‌ನ ಈ ಕ್ರಮವು ಹೊರಬಿದ್ದಿದೆ.

    ಇತ್ತೀಚೆಗೆ ವೈಎಸ್ ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು (ವೈಎಸ್ಆರ್​​​​​ಟಿಪಿ) ದೆಹಲಿಯಲ್ಲಿ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಜೊತೆ ವಿಲೀನಗೊಳಿಸಿ, ಆಂಧ್ರಪ್ರದೇಶದ ಹೊಸ ಪ್ರಮುಖ ಕಾಂಗ್ರೆಸ್ ನಾಯಕಿಯಾಗಿ ಹೊರಹೊಮ್ಮಿದರು. ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ಆಂಧ್ರ ಪ್ರದೇಶ ವಿಧಾನಸಭೆಯ ಅಧಿಕಾರಾವಧಿಯು ಜೂನ್ 11, 2024 ರಂದು ಕೊನೆಗೊಳ್ಳಲಿದೆ. ಇಲ್ಲಿ ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆ 2019ರ ಏಪ್ರಿಲ್‌ನಲ್ಲಿ ನಡೆದಿತ್ತು.  

    “ಪದಗಳೇ ಸಿಗುತ್ತಿಲ್ಲ…”: ಪ್ರಧಾನಿ ಮೋದಿಯವರಿಂದ ಪ್ರಶಂಸೆ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಗಾಯಕಿ ಶಿವಶ್ರೀ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts