More

    ಜೈನಮುನಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುವವರೆಗೂ ಆಮರಣಾಂತ ಉಪವಾಸ: ಗುಣಧರನಂದಿ ಮಹಾರಾಜ ಸ್ವಾಮೀಜಿ

    ಹುಬ್ಬಳ್ಳಿ: 108 ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಅವರ ಭೀಕರ ಕೊಲೆ ಹಿನ್ನೆಲೆಯಲ್ಲಿ ಜೈನಮುನಿಗಳನೇಕರು ಖಂಡನೆ ವ್ಯಕ್ತಪಡಿಸಲಾರಂಭಿಸಿದ್ದು, ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಮಾತ್ರವಲ್ಲ, ಜೈನಮುನಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುವವರೆಗೂ ಆಮರಣಾಂತ ಉಪವಾಸ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನಮುನಿ ಗುಣಧರನಂದಿ‌ ಮಹಾರಾಜ ಸ್ವಾಮೀಜಿ, ಒಬ್ಬ ಜೈನ‌ಮುನಿಗೆ ಈ ರೀತಿ‌ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ‌ ಸಂಗತಿ. ಇಂತಹ ಘಟನೆಯಾದರೂ ಮುಖ್ಯಮಂತ್ರಿ ಯಾವುದೇ ಸ್ಪಂದನೆ ನೀಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
    ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಬೆಳಕಿಗೆ ಬಂದಿದೆ. ಆ ಬಳಿಕ ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ. ರಾಜ್ಯ ಗೃಹ ಸಚಿವರು ನಾಳೆ ಸಂಜೆ 5 ಗಂಟೆಯೊಳಗೆ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ ಎಂದರು.

    ಇದನ್ನೂ ಓದಿ: ಯಥಾಸ್ಥಿತಿ ಕಾಪಾಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ಮದ್ಯಪಾನಪ್ರಿಯರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

    ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು. ಮಾತ್ರವಲ್ಲ, ಜೈನಮುನಿಗಳಿಗೆ ಸೂಕ್ತ ರಕ್ಷಣೆ ಸಿಗಬೇಕು. ಜೈನ ಮುನಿಗಳು ದೇಶಾಂತರ ಪಾದಯಾತ್ರೆ ಹಮ್ಮಿಕೊಳ್ಳುತ್ತಾರೆ. ಅಂತಹ ಜೈನ‌ಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಬೇಡಿಕೆ ಇಡಲಾಗಿದೆ. ಪ್ರತಿ ಜೈನ‌ಮುನಿಗೆ ಸೂಕ್ತ ಭದ್ರತೆ ಒದಗಿಸಬೇಕು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮೂಲಕ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಸರ್ಕಾರಗಳು ಸ್ಪಂದಿಸದೆ ಹೋದಲ್ಲಿ ಆಮರಣಾಂತ ಉಪವಾಸ ಕೈಬಿಡಲ್ಲ, ನಮಗೆ ಭದ್ರತೆ ಒದಗಿಸುವವರೆಗೂ ಆಮರಣಾಂತ ಉಪವಾಸ ಖಚಿತ ಎಂದು ಹೇಳಿದ್ದಾರೆ.

    ಗೃಹ ಸಚಿವ ಪರಮೇಶ್ವರ್ ಅವರು ಕರೆ ಮೂಲಕ ಗುಣಧರನಂದಿ ಮಹಾರಾಜ ಸ್ವಾಮೀಜಿ ಜತೆ ಮಾತನಾಡಿ, ಅವರ ಬೇಡಿಕೆಯನ್ನು ಆಲಿಸಿ, ಈಡೇರಿಸುವ ಭರವಸೆ ನೀಡಿದ್ದಾರೆ.

    ಅಪ್ಪ-ಅಮ್ಮ ಸ್ಥಳದಲ್ಲೇ ಸಾವು; ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts