More

    ನಾಡಿದ್ದೇ ‘ರಾಯರು ಮಾವನ ಮನೆಗೆ..’; ಇದು ಕನ್ನಡ ಚಿತ್ರರಂಗದಲ್ಲೇ ಪ್ರಥಮ!

    ಬೆಂಗಳೂರು: ‘ರಾಯರು ಬಂದರು ಮಾವನ ಮನೆಗೆ’ ಇದು ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು. ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ, ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ‘ಮೈಸೂರು ಮಲ್ಲಿಗೆ’ ಸಿನಿಮಾದ ಅತ್ಯುತ್ತಮ ಗೀತೆ ಇದು. ಅಂದಹಾಗೆ ನಾಡಿದ್ದೂ ‘ರಾಯರು ಮಾವನ ಮನೆಗೆ’ ಬರಲಿದ್ದಾರೆ. ಅರ್ಥಾತ್, ‘ರಾಯರು ಬಂದರು ಮಾವನ ಮನೆಗೆ’ ಎಂಬ ಶೀರ್ಷಿಕೆಯಲ್ಲಿ ಚಿತ್ರವೊಂದು ಬಿಡುಗಡೆ ಆಗಲಿದೆ.

    ನಿಜ.. ಇದೇ ಶೀರ್ಷಿಕೆಯಲ್ಲಿ ಈ ಹಿಂದೆಯೂ ಒಂದು ಕನ್ನಡ ಸಿನಿಮಾ ಬಿಡುಗಡೆ ಆಗಿತ್ತು. ‘ರಾಯರು ಬಂದರು ಮಾವನ ಮನೆಗೆ’ ಎಂಬ ಟೈಟಲ್​ನ ಆ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ದ್ವಾರಕೀಶ್, ಬಿಂದಿಯಾ, ಡಾಲಿ ಮುಂತಾದವರು ಅಭಿನಯಿಸಿದ್ದರು. ಆದರೆ ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

    ಅದಾಗ್ಯೂ ಈ ‘ರಾಯರು ಬಂದರು ಮಾವನ ಮನೆಗೆ’ ಚಿತ್ರ ಕನ್ನಡ ಚಿತ್ರರಂಗದಲ್ಲೇ ಪ್ರಥಮ. ಏಕೆಂದರೆ, ಇದು ಮೂಲತಃ ಗುಜರಾತಿ ಸಿನಿಮಾ. ಗುಜರಾತಿ ಚಿತ್ರವೊಂದು ಕನ್ನಡದಲ್ಲಿ ತೆರೆಕಾಣುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

    ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಆಗಮನ ಸಾಧ್ಯತೆ; ಕರ್ನಾಟಕಕ್ಕೆ ಯಾವಾಗ ಮಾನ್ಸೂನ್ ಪ್ರವೇಶ?

    ‘ವರ ಪಧಾರವೋ ಸಾವಧಾನ’ ಎಂಬ ಹೆಸರಿನ ಗುಜರಾತಿ ಸಿನಿಮಾ ಕನ್ನಡದಲ್ಲಿ ‘ರಾಯರು ಬಂದರು ಮಾವನ ಮನೆಗೆ’ ಎಂಬ ಶೀರ್ಷಿಕೆಯಲ್ಲಿ ಜೂ. 7ರಂದು ತೆರೆ ಕಾಣುತ್ತಿದೆ. ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿರುವುದು ‘ವಿಕ್ರಾಂತ್ ರೋಣ’ ಚಿತ್ರವನ್ನು ನಿರ್ಮಿಸಿದ್ದ ಜಾಕ್ ಮಂಜು. ಸುದೀಪ್ ಆಪ್ತರಾಗಿರುವ ಜಾಕ್ ಮಂಜು ತಮ್ಮದೇ ‘ಶಾಲಿನಿ ಆರ್ಟ್ ಬ್ಯಾನರ್​’ನಡಿ ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾವನ್ನು ಕನ್ನಡದಲ್ಲಿ ತೆರೆಗೆ ತರುತ್ತಿದ್ದಾರೆ.

    ಇದನ್ನೂ ಓದಿ: ಪಾರ್ಟಿ ಮುಗಿಸಿ ಕಾರಲ್ಲಿ ಮಲಗಿದ್ದ ಯುವಕ ಅಲ್ಲೇ ಸಾವು; ವಿಷಯ ತಿಳಿಯುತ್ತಿದ್ದಂತೆ ಸ್ನೇಹಿತರಿಬ್ಬರ ಮೊಬೈಲ್​ಫೋನ್​ ಸ್ವಿಚ್ಡ್​ಆಫ್​!

    ‘ರತ್ನಪುರ’, ‘ಜಿತಿ ಲೇ ಜಿಂದಗಿ’ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಪುಲ್ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧು ತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ. ಇದು ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ. ಕುಟುಂಬ, ಸಂಬಂಧಗಳ ಸುತ್ತ ಇಡೀ ಸಿನಿಮಾ ಸಾಗಲಿದೆ.

    ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts