More

    ಬಂಧಿತ ಮಹಿಳಾ ಪಿಎಸ್​ಐ ಅತ್ಯಾಚಾರ ಆರೋಪಿಯಿಂದ ಪಡೆದ ಲಂಚದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ!​

    ಅಹಮದಾಬಾದ್​: ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದೇ ಇರಲು ಅತ್ಯಾಚಾರಿ ಆರೋಪಿಯೊಬ್ಬನಿಂದ ಲಂಚ ಪಡೆದ ಆರೋಪದಲ್ಲಿ ಗುಜರಾತ್​ನ ಅಹಮದಾಬಾದ್​ನ ಮಹಿಳಾ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ರನ್ನು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

    ಶ್ವೇತಾ ಜಡೇಜಾ ಬಂಧಿತ ಮಹಿಳಾ ಪಿಎಸ್​ಐ. ಇವರು ಪಶ್ಚಿಮ ಅಹಮದಾಬಾದ್​ನ ಮಹಿಳಾ ಪೊಲೀಸ್​ ಠಾಣೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2019ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಶ್ವೇತಾ, ಆರೋಪಿ ಕೆನಾಲ್​ ಶಾ ಸಹೋದರನ ಬಳಿ 35 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: VIDEO| ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ: ಬದುಕು ಇಷ್ಟೇನಾ ಎನಿಸುವಂತಹ ದೃಶ್ಯವಿದು

    ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ (ಪಿಎಎಸ್​ಎ) ಪ್ರಕರಣ ದಾಖಲಿಸದಿರಲು ಲಂಚಕ್ಕೆ ಬೇಡಿ ಇಟ್ಟಿದ್ದರು. ಈ ಕಾಯ್ದೆಯಡಿ ಪೊಲೀಸರು ಆರೋಪಿಯನ್ನು ಜಿಲ್ಲಾ ಕಾರಾಗೃಹದಿಂದ ಹೊರಗಿನ ಜೈಲಿಗೆ ಸ್ಥಳಾಂತರಿಸುವುದನ್ನು ತಡೆಯಲು ಪಿಎಸ್​ಐ ಶ್ವೇತಾ ಮುಂದಾಗಿದ್ದರು ಎನ್ನಲಾಗಿದೆ.

    ನಗರ ಅಪರಾಧ ವಿಭಾಗದ ಎಫ್​ಐಆರ್ ಪ್ರಕಾರ ಶ್ವೇತಾ ಜಡೇಜಾ ಅವರು ಬರೋಬ್ಬರಿ 20 ಲಕ್ಷ ರೂ. ಅನ್ನು ಮಧ್ಯವರ್ತಿಯಿಂದ ಪಡೆದು, ಹೆಚ್ಚುವರಿಯಾಗಿ 15 ಲಕ್ಷ ರೂ.ಗೆ ಅತ್ಯಾಚಾರ ಆರೋಪಿ ಬಳಿ ಬೇಡಿಕೆ ಇಟ್ಟಿದ್ದರು. 20 ಲಕ್ಷ ರೂ. ಪಡೆದಿದ್ದಲ್ಲದೆ, ಹೆಚ್ಚುವರಿ ಹಣ ನೀಡುವಂತೆ ಪೀಡಿಸುತ್ತಿದ್ದಕ್ಕೆ ಅತ್ಯಾಚಾರ ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಕಳೆದ ಶುಕ್ರವಾರ ಶ್ವೇತಾರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ: ಫ್ರೆಂಡ್​ ಮನೆಯಲ್ಲೇ ಯುವತಿ ಎಗರಿಸಿದ ಹಣದ ಮೊತ್ತ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ…!

    ಶ್ವೇತಾರನ್ನು ಶನಿವಾರ ಸೆಷನ್ಸ್​ ನ್ಯಾಯಾಲಯದ ಎದುರು ಒಪ್ಪಿಸಲಾಗಿದ್ದು, ಏಳು ದಿನಗಳ ಪೊಲೀಸ್​ ಕಸ್ಟಡಿಗೆ ಕೇಳಲಾಗಿದೆ. ಆದರೆ, ಕೋರ್ಟ್​ ಮೂರು ದಿನಗಳ ಕಾಲಾವಕಾಶ ನೀಡಿದ್ದು, ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ಸರ್ಕಾರಿ ವಕೀಲ ಸುಧೀರ್​ ಬ್ರಹ್ಮಭಟ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    PHOTO GALLERY| ಬರ್ತಡೇ ಗರ್ಲ್​ ಅಂಕಿತಾ: ಕಮಲಿ ಫ್ರೆಂಡ್​ ನಿಂಗಿಯ​ ಬೋಲ್ಡ್ ಲುಕ್ಕಿಗೆ ಫಿದಾ ಆಗೋದು ಗ್ಯಾರೆಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts