More

    ರಾಯಲ್ಸ್​ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದ ಟೈಟಾನ್ಸ್​; ರಾಜಸ್ಥಾನ ವಿರುದ್ಧ ಮೂರು ವಿಕೆಟ್​ ಜಯ ಸಾಧಿಸಿದ ಗುಜರಾತ್​

    ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ 3 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಗುಜರಾತ್​ ಟೈಟಾನ್ಸ್​ ರಾಜಸ್ಥಾನ ರಾಯಲ್ಸ್​ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯಲ್ಸ್​ ತಂಡವು ರಿಯಾನ್​ ಪರಾಗ್​ (76 ರನ್, 48 ಎಸೆತ, 3 ಬೌಂಡರಿ, 5 ಸಿಕ್ಸರ್), ನಾಯಕ ಸಂಜು ಸ್ಯಾಮ್ಸನ್​ (68 ರನ್​, 38 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 196 ರನ್​ ಗಳಿಸಿತ್ತು.

    ಗುಜರಾತ್​ ಪರ ಉಮೇಶ್​ ಯಾದವ್ (4-0-47-1), ಸ್ಪೆನ್ಸರ್​ ಜಾನ್ಸನ್​ (4-0-37-0), ರಶೀದ್​ ಖಾನ್ (4-0-18-1), ನೂರ್​ ಅಹಮದ್ (4-0-43-0), ಮೋಹಿತ್​ ಶರ್ಮಾ (4-0-51-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಇದನ್ನೂ ಓದಿ: ತಾಯಿಗಾಗಿ ಸಾಯಿ ಬಾಬಾ ಗುಡಿ ಕಟ್ಟಿಸಿದ ದಳಪತಿ ವಿಜಯ್​

    197ರನ್​ಗಳ ಗುರಿ ಬೆನ್ನತ್ತಿದ್ದ ಗುಜರಾತ್​ ಟೈಟಾನ್ಸ್​ ಪರ ನಾಯಕ ಶುಭಮನ್​ ಗಿಲ್​ (72 ರನ್, 44 ಎಸೆತ, 6 ಬೌಂಡರಿ, 2 ಸಿಕ್ಸರ್), ಕೊನೆಯ ಓವರ್​ಗಳಲ್ಲಿ ರಶೀದ್​ ಖಾನ್​ (24 ರನ್, 11 ಎಸೆತ, 4 ಬೌಂಡರಿ) ಪ್ರತಿರೋಧದ ಫಲವಾಗಿ 7 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 199 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

    ರಾಜಸ್ಥಾನ​ ಪರ ಟ್ರೆಂಟ್​ ಬೌಲ್ಟ್​ (2-0-8-0), ಆವೇಶ್​ ಖಾನ್​ (4-0-48-1), ಕೇಶವ್​ ಮಹಾರಾಜ್ (2-0-16-0), ಆರ್​. ಅಶ್ವಿನ್ (4-0-40-0), ಯಜುವೇಂದ್ರ ಚಹಲ್ (4-0-43-2), ಕುಲ್​ದೀಪ್​ ಸೇನ್​ (4-0-41-3) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts