More

    ಹಂಪಿಯಲ್ಲಿ ಜಿ 20 ಶೃಂಗಸಭೆ: ಲಂಬಾಣಿ ಕಸೂತಿ ಕಲೆಗೆ ಗಿನ್ನೆಸ್ ರೆಕಾರ್ಡ್​

    ವಿಜಯನಗರ: ವಿಶ್ವಪ್ರಸಿದ್ಧಿಯ ಐತಿಹಾಸಿಕ ಹಂಪಿಯಲ್ಲಿ ಇಂದು ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿದ್ದು, ವಿವಿಧ ದೇಶಗಳ ಪ್ರತಿನಿಧಿಗಳು-ಗಣ್ಯರು ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಲಂಬಾಣಿ ಕಸೂತಿ ಕಲೆ ಗಿನ್ನೆಸ್ ರೆಕಾರ್ಡ್​ಗೆ ಪಾತ್ರವಾಗಿದೆ.

    ಗಿನ್ನಿಸ್ ರೆಕಾರ್ಡ್​ ತಂಡದ ಜೊತೆಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಉಮೇಶ್ ಜಾಧವ್ ಲಂಬಾಣಿ ಕಸೂತಿ ಕಲೆ ತಂಡಕ್ಕೆ ಗಿನ್ನೆಸ್​ ರೆಕಾರ್ಡ್​ ಪ್ರಮಾಣಪತ್ರವನ್ನು ವಿತರಿಸಿದರು.

    ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಸರಣಿ ಹತ್ಯೆ: ಸತ್ಯಾಸತ್ಯತೆ ಪರಿಶೀಲನೆಗೆ ಬಿಜೆಪಿಯಿಂದ 2 ತಂಡಗಳ ರಚನೆ

    ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ಇಲ್ಲಿಯ ಕಲೆ ಗಿನ್ನೆಸ್​ ರೆಕಾರ್ಡ್​ಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಲೆ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳಿಗೆ ಸದಾ ಬೆಂಬಲವಾಗಿದೆ ಎಂದು ಸಚಿವ ಜೋಶಿ ಹೇಳಿದರು.

    ಹಂಪಿಯಲ್ಲಿ ಜಿ 20 ಶೃಂಗಸಭೆ: ಲಂಬಾಣಿ ಕಸೂತಿ ಕಲೆಗೆ ಗಿನ್ನೆಸ್ ರೆಕಾರ್ಡ್​

    ಇದನ್ನೂ ಓದಿ: ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಜಿ-20 ರಾಷ್ಟ್ರಗಳ ಗಣ್ಯರನ್ನು ಲಂಬಾಣಿ ನೃತ್ಯದ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಂಬಾಣಿ ಕಸೂತಿ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, 450 ಲಂಬಾಣಿ ಮಹಿಳೆಯರಿಂದ ತಯಾರಾದ 1300 ಕಸೂತಿ ಕಲೆಗಳ ಪ್ರದರ್ಶನ ನಡೆಯಿತು. ಸಂಡೂರು ಕುಶಲ ಕಲಾ ಕೇಂದ್ರದ ಕಸೂತಿ ಕಲೆ ಮಾಡುವ ಲಂಬಾಣಿ ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು.

    ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts