More

    ಎಲ್ಲರೂ ಮಾಸ್ಕ್​ ತೊಡಬೇಕಾಗಿಲ್ಲ, ಹೀಗಿದ್ದರೆ ಮಾತ್ರ ಮಾಸ್ಕ್​ ಬಳಸಿ; ಆರೋಗ್ಯ ಸಚಿವಾಲಯದಿಂದ ಮಾಸ್ಕ್​ ಮಾರ್ಗದರ್ಶನ

    ನವದೆಹಲಿ: ಕರೊನಾ ವೈರಸ್​ ವಿಶ್ವವ್ಯಾಪಿಯಾಗಿ ಹರಡಲಾರಂಭಿಸಿದೆ. ದೇಶದಲ್ಲಿ ವೈರಸ್​ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಜನರು ಭಯಭೀತರಾಗಿದ್ದಾರೆ. ಜನರು ಭಯ ಪಡುವ ಅವಶ್ಯಕತೆ ಇಲ್ಲ ಬದಲಾಗಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಎಂದು ತಿಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಮಾಸ್ಕ್​ಗಳನ್ನು ಯಾರು ಹಾಕಿಕೊಳ್ಳಬೇಕು ಮತ್ತು ಹೇಗೆ ಹಾಕಿಕೊಳ್ಳಬೇಕು ಎನ್ನುವುದರ ಕುರಿತಾಗಿ ಮಾರ್ಗದರ್ಶನವನ್ನು ನೀಡಿದೆ.

    ಮಾರ್ಗದರ್ಶನದಲ್ಲಿ ಸೂಚಿಸಿರುವ ಪ್ರಕಾರ ಪ್ರತಿಯೊಬ್ಬರೂ ಮಾಸ್ಕ್​ ಧರಿಸುವ ಅಗತ್ಯತೆ ಇಲ್ಲ. ನಿಮ್ಮಲ್ಲಿ ರೋಗ ಲಕ್ಷಣಗಳು ಇದ್ದರೆ, ನೀವು ರೋಗಿಗಳನ್ನು ಹತ್ತಿರದಿಂದ ನೋಡಿಕೊಳ್ಳುತ್ತಿದ್ದೀರೋ, ನಿಮ್ಮ ಅಕ್ಕ ಪಕ್ಕದವರ ಮನೆಯಲ್ಲಿ ಸೋಂಕಿತರು ಅಥವಾ ಶಂಕಿತರು ಇದ್ದರೆ ಮತ್ತು ನೀವು ವೈದ್ಯಕೀಯ ಇಲಾಖೆಯ ಸೇವೆಯಲ್ಲಿದ್ದರೆ ಮಾಸ್ಕ್​ ಧರಿಸುವುದು ಅತ್ಯಗತ್ಯ ಎಂದು ಮಾರ್ಗದರ್ಶಿ ತಿಳಿಸಿದೆ.

    ಮಾಸ್ಕ್​ ಧರಿಸುವವರು ತಾವು ಧರಿಸುವ ಮಾಸ್ಕ್​ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಾಸ್ಕ್​ ಧರಿಸುವಾಗ ಈ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.

    • ನೀವು ತೊಡುವ ಮಾಸ್ಕ್​ ಕೆಳಮುಖವಾಗಿರಬೇಕು
    • ಮಾಸ್ಕ್​ಗಳನ್ನು ಆರು ಗಂಟೆಗಳಿಗೊಮ್ಮೆ ಅಥವಾ ಅದು ಒದ್ದೆಯಾದ ತಕ್ಷಣ ಬದಲಾಯಿಸಬೇಕು
    • ಮಾಸ್ಕ್​ಗಳನ್ನು ನಿಮ್ಮ ಮೂಗು, ಬಾಯಿ ಮತ್ತು ಗಲ್ಲ ಮುಚ್ಚುವಂತೆ ಹಾಕಿಕೊಳ್ಳಬೇಕು. ಯಾವುದೇ ಬದಿಯಲ್ಲಿ ಅಂತರವಿಲ್ಲದಂತೆ ನೋಡಿಕೊಳ್ಳಬೇಕು.
    • ಮಾಸ್ಕ್​ಗಳನ್ನು ಮರುಬಳಕೆ ಮಾಡಬೇಡಿ. ಬಳಸಿದ ಮಾಸ್ಕ್ ಅ​ನ್ನು ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಿ ಕಸದ ಬುಟ್ಟಿ(ಮುಚ್ಚುಳ ಇರುವ ಕಸದ ಬುಟ್ಟಿ)ಯಲ್ಲಿ ಹಾಕಬೇಕು.
    • ಮಾಸ್ಕ್​ಗಳನ್ನು ಮುಟ್ಟುತ್ತಿರಬಾರದು
    • ಮಾಸ್ಕ್​ಗಳನ್ನು ತೆಗೆಯುವಾಗ ಅದರ ಮೇಲ್ಮೈನ್ನು ಮುಟ್ಟಬಾರದು
    • ಮಾಸ್ಕ್​ಗಳನ್ನು ಕುತ್ತಿಗೆಯಲ್ಲಿ ನೇತು ಹಾಕಿಕೊಳ್ಳಬಾರದು
    • ಮಾಸ್ಕ್​ನ್ನು ತೆಗೆದ ನಂತರ ನಿಮ್ಮ ಕೈಗಳನ್ನು ಸೋಪಿನ ನೀರು ಅಥವಾ ಸ್ಯಾನಿಟೈಸರ್​ನಿಂದ ಸ್ವಚ್ಛ ಮಾಡಿಕೊಳ್ಳಬೇಕು. (ಏಜೆನ್ಸೀಸ್​)

    ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ

    ಬ್ರೇಕಿಂಗ್ ನ್ಯೂಸ್- ಕರೊನಾ ವೈರಸ್​ Covid19ಗೆ ದೇಶದಲ್ಲಿ ಮೂರನೇ ಬಲಿ: ಸೋಂಕಿಗೆ ಕೊನೆಯುಸಿರೆಳೆದ ಮುಂಬೈನ 64 ವರ್ಷದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts