More

    ಅತಿಥಿ ಉಪನ್ಯಾಸಕರ ಎಲ್ಲ ಬೇಡಿಕೆ ಈಡೇರಲಿ

    ರಾಮದುರ್ಗ: ಅತಿಥಿ ಉಪನ್ಯಾಸಕರ ನೇಮಕಾತಿಯ ರಾಜ್ಯಮಟ್ಟದ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ, ಅ.7, 9 ಮತ್ತು 10 ರಂದು ಕರ್ತವ್ಯಕ್ಕೆ ಹಾಜರಾಗಿದ್ದು, ಹಾಜರಾದ ದಿನದಿಂದಲೇ ವೇತನ ನೀಡುವುದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಐ.ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ತುಂಬ ಅನ್ಯಾಯವಾಗುತ್ತದೆ. ಈಗಾಗಲೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ 1, 3 ಮತ್ತು 5 ನೇ ಸೆಮಿಸ್ಟರ್ ತರಗತಿಗಳು ಏಕಕಾಲದಲ್ಲಿ ಆರಂಭಗೊಂಡಿವೆ. ಕಾಲೇಜು ಶಿಕ್ಷಣ ಇಲಾಖೆಯ ಇಬ್ಬಗೆಯ ನೀತಿ ಮತ್ತು ಸರ್ಕಾರ ಅತಿಥಿ ಉಪನ್ಯಾಸಕರಿಗೆ ಮಾಡಲು ಯೋಚಿಸುತ್ತಿರುವ ಅನ್ಯಾಯವನ್ನು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.

    ಎಲ್ಲ ಅತಿಥಿ ಉಪನ್ಯಾಸಕರಿಗೆ ಏಕಕಾಲದಿಂದಲೇ ಗೌರವಧನ ನೀಡಬೇಕು. ನೀಡದಿದ್ದರೆ ರಾಜ್ಯಮಟ್ಟದಲ್ಲಿ ನಮ್ಮ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯು ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


    ಸಹ ಪ್ರಾಧ್ಯಾಪಕ ಪ್ರೊ.ಕಮತಗಿ, ಅತಿಥಿ ಉಪನ್ಯಾಸಕರ ತಾಲೂಕಾಧ್ಯಕ್ಷ ಯಲ್ಲಪ್ಪ ಕುರಿ, ವಿ.ಎಸ್.ಲಕ್ಕನಗೌಡ್ರ, ಎನ್.ಬಿ.ಕೊಪ್ಪದ, ಎಂ.ಡಿ. ಜೋಗೋಜಿ, ಮಂಜುಳಾ ಬದಾಮಿ, ಕವಿತಾ ರಂಗನಗೌಡ್ರ, ಪುಷ್ಪ ಮುಳ್ಳೂರು, ರಮೇಶ ಹತ್ತಿ, ಡಾ.ಮಂಜುನಾಥ್ ದಂಡಗಿ, ಡಾ.ವೈ.ಎಸ್.ಹೊಸಮನಿ, ಪಿ.ಎಸ್.ಮುಕಾರಿ, ಡಾ.ಪಿ.ಎಸ್.ಸಿಂಗಾರಗೊಪ್ಪ, ಎಂ.ಬಿ.ಸೂಳಿಕೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts