ವೈರಲ್ ಆಗುತ್ತಿದೆ ಈ ಸೂಪರ್ ಸ್ಟಾರ್ ಬಾಲ್ಯದ ಫೋಟೋ…ಇವರು ಯಾರೆಂದು ಗುರುತಿಸುತ್ತೀರಾ?

2 Min Read
ವೈರಲ್ ಆಗುತ್ತಿದೆ ಈ ಸೂಪರ್ ಸ್ಟಾರ್ ಬಾಲ್ಯದ ಫೋಟೋ…ಇವರು ಯಾರೆಂದು ಗುರುತಿಸುತ್ತೀರಾ?

ಮುಂಬೈ: ಸಿನಿಮಾ ತಾರೆಯರು ತಮ್ಮ ಸ್ಟೈಲ್​​​​​​​​​​​​​​​​, ಸೌಂದರ್ಯ ಮತ್ತು ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆಲ್ಲುತ್ತಾರೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ತಾರೆಯರನ್ನು ಅದೆಷ್ಟು ಇಷ್ಟಪಡುತ್ತಾರೆಂದರೆ ಅವರ ಲೈಫ್​​ಸ್ಟೈಲ್​​​​ನಿಂದ ಹಿಡಿದು ಮುಂಬರುವ ಪ್ರಾಜೆಕ್ಟ್​​​ಗಳ ತನಕ ಎಲ್ಲವನ್ನೂ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಅಂದಹಾಗೆ ನಿಮಗೀಗ ಚಿಕ್ಕದೊಂದು ಟೆಸ್ಟ್. ಇಲ್ಲೊಂದು ಫೋಟೋ ಕೊಡಲಾಗಿದೆ. ಅವರನ್ನು ಗುರುತಿಸಬಹುದೇ ನೋಡಿ…

ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಫೋಟೋ ನೋಡಿದರೆ ನೀವು ಖಂಡಿತವಾಗಿಯೂ ನಟನನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

ಈ ಫೋಟೋದಲ್ಲಿರುವ ಮಗು ಬಾಲಿವುಡ್ ಸೂಪರ್ ಸ್ಟಾರ್
ವೈರಲ್ ಫೋಟೋದಲ್ಲಿ ನೀವು ಚಿಕ್ಕ ಮಗುವನ್ನು ನೋಡಬಹುದು. ಮಗು ನೆಲದ ಮೇಲೆ ಮಲಗಿ ಆಡುತ್ತಿರುವುದನ್ನು ಕಾಣಬಹುದು. ಈ ಫೋಟೋವನ್ನು ನೋಡಿ ಗೊಂದಲಕ್ಕೆ ಒಳಗಾಗುವುದು ಸಹಜ. ಎಂಥವರು ಈ ಫೋಟೋವನ್ನು ನೋಡಿದ ನಂತರ ಊಹಿಸಲು ಸಾಧ್ಯವಾಗುವುದಿಲ್ಲ. ಈ ನಟ ಯಾರಿರಬಹುದು ಎಂದು ಆಶ್ಚರ್ಯಪಡಲು ಪ್ರಾರಂಭಿಸುತ್ತೀರಿ. ಆದರೆ ನಾವು ಈ ಫೋಟೋವನ್ನು ಎಚ್ಚರಿಕೆಯಿಂದ ನೋಡಲು ಪ್ರಯತ್ನಿಸಿದಾಗ, ಅದು ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಭಾಯಿಜಾನ್, ಸಲ್ಮಾನ್ ಖಾನ್ ಎಂದು ತಿಳಿಯುತ್ತದೆ. ಹೌದು, ಫೋಟೋದಲ್ಲಿ ಕಾಣುತ್ತಿರುವ ಈ ತುಂಟ ಮಗು ಸಲ್ಮಾನ್ ಖಾನ್. ಸಲ್ಮಾನ್ ಅವರ ಈ ಫೋಟೋ ತುಂಬಾ ಹಳೆಯದು. ಅವರು ಹಲವು ವರ್ಷಗಳ ಹಿಂದೆ 2019 ರಲ್ಲಿ ತಮ್ಮ ಇನ್​​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಬಾಲ್ಯದ ಫೋಟೋ ನೋಡಿ ಅಭಿಮಾನಿಗಳು ಸಾಕಷ್ಟು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಅಭಿಮಾನಿಗಳು ಸಲ್ಮಾನ್ ಖಾನ್ ಅವರ ಈ ಮುದ್ದಾದ ಫೋಟೋವನ್ನು ಲೈಕ್ ಮತ್ತು ಹೆಚ್ಚು ಕಮೆಂಟ್ ಮಾಡುವ ಮೂಲಕ ಪ್ರೀತಿಯ ಸುರಿಮಳೆ ಹರಿಸುತ್ತಿದ್ದಾರೆ.

See also  ಮಂಗಳೂರಿನಲ್ಲಿ 10 ತಿಂಗಳ ಮಗುವಿಗೂ ಕರೊನಾ ವೈರಸ್​ ಸೋಂಕು; ಸಂಪೂರ್ಣ ಗ್ರಾಮಕ್ಕೇ ದಿಗ್ಬಂಧನ ಹಾಕಿದ ಜಿಲ್ಲಾಡಳಿತ

ಸಲ್ಮಾನ್ ಇಂದು ತಮ್ಮ 58 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 27, 1965 ರಂದು ಜನಿಸಿದ ಸಲ್ಮಾನ್ ಖಾನ್ ಅವರು ಅಪಾರ ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ. ಈ ವಿಶೇಷ ದಿನದಂದು ಅಭಿಮಾನಿಗಳು ಅವರಿಗೆ ಸಾಕಷ್ಟು ಪ್ರೀತಿಯ ಸಂದೇಶ ಕಳುಹಿಸುತ್ತಿದ್ದಾರೆ. ಸಲ್ಮಾನ್ ಅವರ ಕೈಯ್ಯಲ್ಲಿ ಸದ್ಯ ‘ದಿ ಬುಲ್’, ‘ದಬಾಂಗ್ 4’, ‘ಕಿಕ್ 2’ ಮುಂತಾದ ಹಲವು ಚಿತ್ರಗಳಿವೆ. 

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟ ಪ್ರಕರಣ: ಅವರು ಎಲ್ಲಿಂದ ಬಂದರು, ಎಲ್ಲಿಗೆ ಹೋದರು? ತನಿಖೆಯಲ್ಲಿ ಇಲ್ಲಿಯವರೆಗೂ ಏನೇನಾಗಿದೆ?

Share This Article