More

    9 ನಿಮಿಷ ಲೈಟ್ ಆಫ್ ಮಾಡಿದ್ರೆ ಸಮಸ್ಯೆ ಆಗತ್ತಂತೆ… ಯಾರಿಗೆ ಏನು- ಮುಂದೆ ಓದಿ..

    ಬೆಂಗಳೂರು: ಭಾನುವಾರ ರಾತ್ರಿ 9 ಗಂಟೆಗೆ ಮನೆಯ ದೀಪಗಳನ್ನು (ಲೈಟ್) 9 ನಿಮಿಷ ಆರಿಸಿ ಬಾಲ್ಕನಿ ಅಥವಾ ಮುಂಬಾಗಿಲ ಬಳಿ ದೀಪ ಇಲ್ಲವೆ ಮೊಂಬತ್ತಿ ಬೆಳಗಿಸಬೇಕೆಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಇಂಧನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವಿದ್ಯುತ್ ಪೂರೈಕೆ ಹಠಾತ್ ಸ್ಥಗಿತದಿಂದ ಉಂಟಾಗಬಹುದಾದ ತಾಂತ್ರಿಕ ತೊಂದರೆ ತಡೆಗೆ ಇನ್ನೂ ಸಿದ್ಧತೆ ಆರಂಭವಾಗಿಲ್ಲ.

    ಒಮ್ಮೆಗೆ ಎಲ್ಲೆಡೆ ವಿದ್ಯುತ್ ಆಫ್ ಮಾಡಿದಾಗ ವಿದ್ಯುತ್ ಪವರ್ ಗ್ರಿಡ್​ನಲ್ಲಿನ ಜನರೇಟರ್ ಹಾಗೂ ಟ್ರಾನ್ಸ್​ಫಾರ್ಮರ್​ಗಳಿಗೆ ಹಾನಿ ಉಂಟಾಗಲಿದೆ. ಇದನ್ನು ಸರಿಪಡಿಸುವುದೇ ದೊಡ್ಡ ಸಮಸ್ಯೆಯಾಗಲಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ಎಲ್ಲ ಕೈಗಾರಿಕಾ ಕಾರ್ಖಾನೆಗಳು, ಮಾಲ್, ಸಿನಿಮಾ ಸೇರಿ ಬಹುತೇಕ ಸಂಸ್ಥೆಗಳು ಬಂದ್ ಆಗಿವೆ. ಇದೀಗ ಒಂದೇ ಬಾರಿಗೆ ಮನೆಗಳಲ್ಲಿಯೂ ಲೈಟ್ ಆಫ್ ಮಾಡಿದಾಗ ವಿದ್ಯುತ್ ವಾಪಸ್ ಜನರೇಟರ್​ಗೆ ಹೋಗಲಿದೆ. ಈ ಸಂದರ್ಭದಲ್ಲಿ ಟ್ರಿಪ್ ಆಗಿ ಆಫ್ ಆದಾಗ ಪವರ್ ಗ್ರಿಡ್ ಮೇಲೆ ಹೆಚ್ಚಿನ ಶಕ್ತಿ ಪೂರೈಕೆಯಾಗಿ ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ.

    ಕನಿಷ್ಠ ಶೇ. 30 ವಿದ್ಯುತ್ ಪೂರೈಕೆ ಆಗುತ್ತಿರಬೇಕು ಹಾಗೂ ಉತ್ಪಾದನೆ ತಗ್ಗಿಸಿ ಕೊಳ್ಳಬೇಕು ಎಂದು ವಿದ್ಯುತ್ ಕ್ಷೇತ್ರದ ತಜ್ಞರು ಅಭಿಪ್ರಾಯಪಡುತ್ತಾರೆ. ವಿದ್ಯುತ್ ಉತ್ಪಾದನಾ ಘಟಕದಲ್ಲಿನ ಟ್ರಾನ್ಸ್​ಫಾರ್ಮರ್​ಗಳು 12 ಪಾಯಿಂಟ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಅವುಗಳನ್ನು 4-5 ಪಾಯಿಂಟ್​ಗೆ ಇಳಿಸಿಕೊಳ್ಳಬೇಕಾಗುತ್ತದೆ. ಇಲ್ಲದೆ ಹೋದರೆ ಸಮಸ್ಯೆಯಾಗುತ್ತದೆ. ಪ್ರತಿನಿತ್ಯ 7ರಿಂದ 9 ಗಂಟೆಯ ಅವಧಿ ಪೀಕ್ ಲೋಡ್ ಅವಧಿಯಾಗಿರುತ್ತದೆ, ಆಗ ಹೆಚ್ಚಿನ ವಿದ್ಯುತ್ ನೀಡಲಾಗುತ್ತದೆ. 9 ಗಂಟೆಗೆ ಒಮ್ಮೆಗೆ ಪೀಕ್ ಲೋಡ್​ನಿಂದ ಕಡಿಮೆಯಾಗಬೇಕಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಏ.5ರಂದು ವಿದ್ಯುತ್ ಬೇಡಿಕೆ ಕಡಿಮೆಯಾದಾಗ ಪವರ್ ಗ್ರಿಡ್​ನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದಂತೆ ಏನೆಲ್ಲ ಪೂರ್ವನಿಯೋಜಿತ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಕೇಂದ್ರ ಇಂಧನ ಸಚಿವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆದಿದೆ. ಬ್ಲ್ಯಾಕ್​ಔಟ್​ ಸಂದರ್ಭದಲ್ಲಿ ವಿದ್ಯುತ್ ನಿರ್ವಹಣಾ ಸ್ಥಿರತೆ ಕಾಪಾಡುವ ಬಗ್ಗೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

    ವಿದ್ಯುತ್ ಬಿಲ್ ಪಾವತಿಗಿಲ್ಲ ವಿನಾಯಿತಿ: ಸರಾಸರಿ ದರ ಪಾವತಿಸಿ ಮೀಟರ್ ರೀಡರ್ ಮನೆಗೆ ಬರಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts