More

    ಸುರತ್ಕಲ್ ಲೈಟ್‌ಹೌಸ್ ನವೀಕರಣಕ್ಕೆಕೇಂದ್ರ ಸಚಿವರಿಂದ ಮಂಜೂರಾತಿ

    ಮಂಗಳೂರು: ನಗರ ವ್ಯಾಪ್ತಿಯಲ್ಲಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಸುರತ್ಕಲ್ ಲೈಟ್‌ಹೌಸ್ ನವೀಕರಣ ಮಾಡಿ ಅಭಿವೃದ್ಧಿಪಡಿಸಲು ವಿವಿಧ ಕಾಮಗಾರಿಗಳಿಗೆ ಕೇಂದ್ರ ಬಂದರು ಇಲಾಖೆ ಸಚಿವ ಮಾನ್‌ಸುಖ್ ಮಾಂಡವೀಯ ಮಂಜೂರಾತಿ ನೀಡಿದ್ದಾರೆ.
    ಡೈರೆಕ್ಟರೇಟ್ ಜನರಲ್ ಆಫ್ ಲೈಟ್‌ಹೌಸ್ ಮತ್ತು ಲೈಟ್‌ಶಿಪ್(ಡಿಜಿಎಲ್‌ಎಲ್) ಕಾಮಗಾರಿಗಳಿಗೆ ವಾಸ್ತುಶಿಲ್ಪ ವಿನ್ಯಾಸ ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಲಾಗುವುದು. 1969-70ರಲ್ಲಿ ಲೈಟ್‌ಹೌಸ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 1972ರಲ್ಲಿ ಪೂರ್ಣಗೊಂಡಿತ್ತು. ಪ್ರಸ್ತುತ ಇದು ಮಂಗಳೂರಿನ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿತ್ತು. ಮನವಿ ಪುರಸ್ಕರಿಸಿದ ಅವರು ಕಾಮಗಾರಿಗೆ ಅನುಮತಿ ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

    ನಡೆಯಲಿರುವ ಕಾಮಗಾರಿಗಳು: ಲೈಟ್‌ಹೌಸ್ ನವೀಕರಣದಲ್ಲಿ ಸಂಪರ್ಕ ಸೇತುವೆ ನಿರ್ಮಾಣ, ಕ್ಯಾಫ್ಸೂಲ್ ಲಿಫ್ಟ್ ಅಳವಡಿಕೆ. ಪ್ರವೇಶ ದ್ವಾರ, ಸೆಕ್ಯೂರಿಟಿ ಕ್ಯಾಬಿನ್, ಟಿಕೇಟ್ ಕೌಂಟರ್, ಲ್ಯಾಂಡ್‌ಸ್ಕೇಪಿಂಗ್, ಹಾರ್ಡ್‌ಸ್ಕೇಪಿಂಗ್, ಲೈಟಿಂಗ್ ಮತ್ತು ಮಕ್ಕಳ ಆಟದ ಪ್ರದೇಶ ಅಭಿವೃದ್ಧಿ. ಪ್ರಸ್ತುತ ಇರುವ ಎಐಎಸ್ ಕಟ್ಟಡದ ನೆಲಮಹಡಿಯನ್ನು ಗ್ಯಾಲರಿಯನ್ನಾಗಿ ಮತ್ತು 1ನೇ ಮಹಡಿಯನ್ನು ಲೈಟ್ ಹೌಸ್ ಕಾರ್ಯಾಚರಣಾ ಕೊಠಡಿಯನ್ನಾಗಿ ಪರಿವರ್ತಿಸುವುದು. ಲೈಟ್‌ಹೌಸ್ ಸುತ್ತಲಿನ ಅವರಣಗೋಡೆ ಅಭಿವೃದ್ಧಿ ಹಾಗೂ ಲೈಟ್‌ಹೌಸ್‌ನಿಂದ ಬೀಚ್‌ಗೆ ಸಂಪರ್ಕ ವ್ಯವಸ್ಥೆ ಕಾಮಗಾರಿ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts