More

    ದೆಹಲಿ ಮಾದರಿಯಲ್ಲಿ ಮತ್ತೊಂದು ಹತ್ಯೆ ಪ್ರಕರಣ; ಅಜ್ಜಿಯನ್ನು ಕೊಂದು ಕಬೋರ್ಡ್​​ನಲ್ಲಿಟ್ಟು ಪರಾರಿಯಾದ ಅನ್ಯಕೋಮಿನ ಮಹಿಳೆ!

    ಬೆಂಗಳೂರು: ದಿನದಿಂದ ದಿನಕ್ಕೆ ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅನೇಕ ಜನರು ಅಮಾನುಷವಾಗಿ ಹತ್ಯೆಯಾಗುತ್ತಿದ್ದಾರೆ. ಇದೀಗ ಅನೇಕಲ್​ ತಾಲೂಕಿನ ನೆರಳೂರು ಬಳಿ, ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಅನ್ಯಕೋಮಿನ ಮಹಿಳೆಯೊಬ್ಬಳು ಅಜ್ಜಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ನಂತರ ಅಜ್ಜಿಯ ಮೃತದೇಹವನ್ನು ಕಬೋರ್ಡ್​​ನಲ್ಲಿ ಬಚ್ಚಿಟ್ಟು, ಅನ್ಯಕೋಮಿನ ಮಹಿಳೆ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ. ಸದ್ಯ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಮಾದರಿಯಲ್ಲೇ ಅಜ್ಜಿಯ ಕೊಲೆ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಮನೆಯೊಂದರ ಮೂರನೇ ಮಹಡಿಯಲ್ಲಿ ಅಜ್ಜಿ ಹಾಗೂ ಕುಟುಂಬಸ್ಥರು ವಾಸವಾಗಿದ್ದರು. ನಾಲ್ಕನೇ ಮಹಡಿಯಲ್ಲಿ ಅನ್ಯಕೋಮಿನ ಯುವತಿ ವಾಸವಾಗಿದ್ದಳು. ಕಳೆದ ಮೂರು ದಿನಗಳ ಹಿಂದೆ ಅಜ್ಜಿಯನ್ನು ತನ್ನ ಮನೆಗೆ ಮಹಿಳೆ ಆಹ್ವಾನಿಸಿದ್ದಳು. ಇದಾದ ಬಳಿಕೆ ಅಜ್ಜಿಯ ಪತ್ತೆಯಾಗಿರಲಿಲ್ಲ. ಕುಟುಂಬಸ್ಥರು ಎಷ್ಟೇ ಹುಡುಕಾಡಿದರೂ ಅಜ್ಜಿ ಮಾತ್ರ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

    ಮೂರು ದಿನಗಳಿಂದ ಮಹಿಳೆ ವಠಾರದಲ್ಲಿ ಕಾಣದ ಹಿನ್ನೆಲೆಯಲ್ಲಿ ಅನುಮಾನ ಬಂದ ಅಜ್ಜಿಯ ಕುಟುಂಬಸ್ಥರು, ಅನ್ಯಕೋಮಿನ ಮಹಿಳೆಯ ಮನೆಯ ಬೀಗ ತೆಗೆಸಿದ್ದಾರೆ. ನಂತರ ಮನೆಯನ್ನು ಪರಿಶೀಲಿಸಿದಾಗ ಕಬೋರ್ಡ್​​ನಲ್ಲಿ ಅಜ್ಜಿಯ ಮೃತದೇಹವನ್ನು ಪ್ಯಾಕ್ ಮಾಡಿ ಇಡಲಾಗಿರುವುದು ಗಮನಕ್ಕೆ ಬಂದಿದೆ. ಇನ್ನು ಅನ್ಯಕೋಮಿನ ಮಹಿಳೆ ಕೊಲೆ ಮಾಡಿ ಒಂದು ದಿನದ ಬಳಿಕ ಮನೆಯಿಂದ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ.

    ಮೂಲತಃ ತುಮಕೂರು ಜಿಲ್ಲೆಯ ಶಿರಾ ಮೂಲದವರಾದ ಅಜ್ಜಿ ಪಾರ್ವತಮ್ಮ ಕುಟುಂಬ ಒಂಬತ್ತು ತಿಂಗಳ ಹಿಂದೆ ನೆರಳೂರು ಬಳಿಯ ಬಾಡಿಗೆ ಮನೆಗೆ ಬಂದು ನೆಲೆಸಿತ್ತು. ಶುಕ್ರವಾರ ಟ್ಯೂಷನ್ ನಿಂದ ಮಕ್ಕಳನ್ನು ಕರೆದುಕೊಂಡು ಬರಲು ಸೊಸೆ ಜ್ಯೋತಿ ತೆರಳಿದ್ದರು. ಸೊಸೆ ಹೋಗುತ್ತಿದ್ದಂತೆ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗಿ ಕೃತ್ಯ ಮಾಡಲಾಗಿದೆ. ಅಜ್ಜಿಯ ಮೈ ಮೇಲೆ ಸಾಕಷ್ಟು ಚಿನ್ನವಿದ್ದ ಕಾರಣ ಕೊಲೆ ಮಾಡಿ ಚಿನ್ನದ ಸಮೇತ ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಅತ್ತಿಬೆಲೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿ ಮಹಿಳೆಯ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts