More

    ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಟಾಯ್ಲೆಟ್ ತೊಳೆಸಿದ ಆರೋಪದಡಿ ಪ್ರಾಂಶುಪಾಲೆ ಬಂಧನ!

    ಚೆನ್ನೈ: ಈರೋಡ್ ಜಿಲ್ಲೆಯ ಪಾಲಕ್ಕರೈ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆ ಶಾಲೆಯೊಂದರಲ್ಲಿ ಆರು ಜನ ವಿದ್ಯಾರ್ಥಿಗಳನ್ನು ಶಿಕ್ಷಕರು ಶಾಲೆಯ ಶೌಚಗೃಹ ಸ್ವಚ್ಛಗೊಳಿಸಲು ನೇಮಿಸಿದ ಘಟನೆ ನಡೆದಿತ್ತು. ವಿದ್ಯಾರ್ಥಿಗಳಿಬ್ಬರು ಶಾಲೆಯ ಆವರಣದಲ್ಲಿರುವ ಟಾಯ್ಲೆಟ್ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ವಿದ್ಯಾರ್ಥಿಯೊಬ್ಬನಿಗೆ ಡೆಂಗ್ಯೂ ಜ್ವರ ಬಂದಿದ್ದು, ಈ ವೇಳೆ ಮನೆಯಲ್ಲಿ ತಾಯಿ, ಡೆಂಗ್ಯೂ ಜ್ವರಕ್ಕೆ ಕಾರಣವೇನು? ಎಲ್ಲೆಲ್ಲಾ ಓಡಾಡಿದ್ದೀಯಾ ಎಂದು ಮಗನನ್ನು ವಿಚಾರಿಸಿದ್ದಾರೆ. ಈ ವೇಳೆ ಬಾಲಕ ಶಾಲೆಯಲ್ಲಿ ನನ್ನನ್ನು ಟಾಯ್ಲೆಟ್ ತೊಳೆಯಲು ನೇಮಿಸಿದ್ದಾರೆ. ಇದಿರಿಂದ ಡೆಂಗ್ಯೂ ಸೋಂಕು ತಗುಲಿರಬಹುದ ಎಂದು ಹೇಳಿದ್ದ. ಇದರಿಂದ ಆಕ್ರೋಶಗೊಂಡ ತಾಯಿ ನನ್ನ ಮಗನಿಗೆ ಡೆಂಗ್ಯೂ ಬರಲು ಶಿಕ್ಷಕರೇ ಕಾರಣ ಎಂದು ಆರೋಪಿಸಿದ್ದರು.

    https://twitter.com/Satyamooknayak/status/1598618688168525825

    ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲೆ ಗೀತಾ ರಾಣಿ ವಿರುದ್ಧ ದೂರು ದಾಖಲಾಗಿತ್ತು. ಇದಾಗುತ್ತಿದ್ದಂತೆ ಪ್ರಾಂಶುಪಾಲೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೆರುಂದರೈ ಜಿಲ್ಲೆಯಲ್ಲಿ ಪ್ರಾಂಶುಪಾಲೆಯ ಬಂಧನವಾಗಿದೆ ಎಂದು ವರದಿಯಾಗಿದೆ.

    ವರದಿಯ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳನ್ನು ಮಾತ್ರ ಶೌಚಗೃಹ ಶುಚಿಗೊಳಿಸಲು ನೇಮಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಾಕಷ್ಟು ಟೀಕೆಗಳು ಎದುರಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts