More

    VIDEO: ವಿದ್ಯಾರ್ಥಿಗಳಿಂದಲೇ ಟಾಯ್ಲೆಟ್ ತೊಳೆಸಿದ ಶಾಲಾಡಳಿತ; ಮಗನಿಗೆ ಡೆಂಗ್ಯೂ ಬರಲು ಶಿಕ್ಷಕರೇ ಕಾರಣವೆಂದ ತಾಯಿ!

    ಚೆನ್ನೈ: ಈರೋಡ್ ಜಿಲ್ಲೆಯಲ್ಲಿನ ಶಾಲೆಯೊಂದರಲ್ಲಿ ಆರು ಜನ ವಿದ್ಯಾರ್ಥಿಗಳನ್ನು ಶಿಕ್ಷಕರು ಶಾಲೆಯ ಶೌಚಗೃಹ ಸ್ವಚ್ಛಗೊಳಿಸಲು ನೇಮಿಸಿದ ಘಟನೆ ನಡೆದಿದೆ. ವಿದ್ಯಾರ್ಥಿಗಳಿಬ್ಬರು ಶಾಲೆಯ ಆವರಣದಲ್ಲಿರುವ ಟಾಯ್ಲೆಟ್ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿದ್ಯಾರ್ಥಿಯೊಬ್ಬನಿಗೆ ಡೆಂಗ್ಯೂ ಜ್ವರ ಬಂದಿದೆ. ಈ ವೇಳೆ ಮನೆಯಲ್ಲಿ ತಾಯಿ, ಡೆಂಗ್ಯೂ ಜ್ವರಕ್ಕೆ ಕಾರಣವೇನು? ಎಲ್ಲೆಲ್ಲಾ ಓಡಾಡಿದ್ದೀಯಾ ಎಂದು ಮಗನನ್ನು ವಿಚಾರಿಸಿದ್ದಾಳೆ. ಈ ವೇಳೆ ಬಾಲಕ ಶಾಲೆಯಲ್ಲಿ ನನ್ನನ್ನು ಟಾಯ್ಲೆಟ್ ತೊಳೆಯಲು ನೇಮಿಸಿದ್ದಾರೆ. ಇದಿರಿಂದ ಡೆಂಗ್ಯೂ ಸೋಂಕು ತಗುಲಿರಬಹುದ ಎಂದು ಹೇಳಿದ್ದಾನೆ. ಈ ಮೂಲಕ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ತಾಯಿ ನನ್ನ ಮಗನಿಗೆ ಡೆಂಗ್ಯೂ ಬರಲು ಶಿಕ್ಷಕರೇ ಕಾರಣ ಎಂದು ಆರೋಪಿಸಿದ್ದಾರೆ.

    https://twitter.com/Satyamooknayak/status/1598618688168525825

    ತನ್ನ ಮಗು ಹೇಳಿದ ಮಾಹಿತಿಯಂತೆ ತಾಯಿ, ಶಾಲೆಯ ಪ್ರಾಂಶುಪಾಲೆ ಗೀತಾ ರಾಣಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಾಂಶುಪಾಲೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ ಪರಿಶಿಷ್ಠ ಜಾತಿಗೆ ಸೇರಿದ ಮಕ್ಕಳನ್ನು ಮಾತ್ರ ಶೌಚಗೃಹ ಶುಚಿಗೊಳಿಸಲು ನೇಮಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಮಾಹಿತಿ ಪ್ರಕಾರ, ತಮಿಳುನಾಡು ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಮತ್ತು ಶಾಲೆಯ ಪ್ರಾಂಶುಪಾಲೆಯ ಮೇಲೆ ಬಾಲನ್ಯಾಯ ಕಾಯ್ದೆ, ಎಸ್‌ಸಿಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts