More

    ಗ್ರಾಮಾಯಣ: ಪ್ರಗತಿಯಲ್ಲಿದೆ ಮೊದಲ ಹಂತದ ಮತದಾನ

    ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. 117 ತಾಲೂಕುಗಳ 3,019 ಗ್ರಾಮ ಪಂಚಾಯಿತಿಗಳ ಚುನಾವಣೆ ಪ್ರಗತಿಯಲ್ಲಿದ್ದು, ಕೋವಿಡ್ 19 ನಿಯಮ ಪಾಲನೆಯೊಂದಿಗೆ ಮತದಾರರು ಮತ ಚಲಾಯಿಸಲು ಆರಂಭಿಸಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಶುರುವಾಗಿದ್ದು, ಸಂಜೆ 5 ಗಂಟೆ ತನಕ 23,000ಕ್ಕೂ ಹೆಚ್ಚು ಬೂತ್​ಗಳಲ್ಲಿ ನಡೆಯಲಿದೆ.

    ಈಗಾಗಲೇ 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದವರ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಕೋವಿಡ್ 19 ಸೋಂಕು ಪೀಡಿತರು ಮತ್ತು ಪ್ರೈಮರಿ, ಸೆಕೆಂಡರಿ ಸಂಪರ್ಕ ಹೊಂದಿದವರು ಕೂಡ ದಿನದ ಕೊನೆಯಲ್ಲಿ ಬಂದು ಮತ ಚಲಾಯಿಸಬಹುದಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಎರಡು ಗಂಟೆಯಲ್ಲಿ ಶೇ. 10.84ರಷ್ಟು ಮತದಾನ

    ಎಲ್ಲ ಮತಗಟ್ಟೆಗಳಲ್ಲೂ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಎಲ್ಲರೂ ಮಾಸ್ಕ್ ಧರಿಸುವಂತೆ ನಿರ್ದೇಶಿಸಲಾಗಿದೆ. ಅಲ್ಲದೆ, ಸ್ಯಾನಿಟೈಸರ್ ಕೂಡ ಒದಗಿಸಲಾಗಿದೆ. ಪ್ರತಿಯೊಂದು ಬೂತ್​ನಲ್ಲಿ 1,000 ದಿಂದ 1,500 ಮತದಾರರಿಗೆ ಮಾತ್ರವೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ದಲಾಲ್​ ಸ್ಟ್ರೀಟ್​ನಲ್ಲಿ ಬ್ಲಡ್​ಬಾತ್​: 7 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ ಸೆನ್ಸೆಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts