More

    ಚರ್ಮಗಂಟು ರೋಗಕ್ಕೆ 5 ಸಾವಿರ ಲಸಿಕೆ; ಮೃತ ಜಾನುವಾರುಗಳಿಗೆ 30 ಸಾವಿರ ರೂ. ವರೆಗೆ ಪರಿಹಾರ: ತಾಪಂ ಇಒ ಕೆ.ಜಿ.ಕುಮಾರ್

    ಸೊರಬ: ಜಾನುವಾರಗಳ ಚರ್ಮಗಂಟು ರೋಗಕ್ಕೆ ಮುಂಜಾಗ್ರತೆಯಾಗಿ ತಾಲೂಕಿನ ಗಡಿಭಾಗದ ಗ್ರಾಮಗಳಿಗೆ ಮೊದಲ ಹಂತವಾಗಿ ಸರ್ಕಾರ 5000 ವಾಯಿಲ್ ಲಸಿಕೆ ನೀಡಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಕುಮಾರ್ ತಿಳಿಸಿದರು.
    ಶುಕ್ರವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಪಂ ಆಡಳಿತಾಧಿಕಾರಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಪೂರ್ಣಿಮಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪಶು ಇಲಾಖೆ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ತಾಲೂಕಿನಲ್ಲಿ ನೂರಾರು ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡು ಬಳಲುತ್ತಿವೆ ಎಂಬ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಹೊರ ತಾಲೂಕಿನಲ್ಲಿ ಮೊದಲು ಹೆಚ್ಚಾಗಿ ಕಾಣಿಸಿಕೊಂಡಿದೆ. ಆದ್ದರಿಂದ ಗಡಿಭಾಗದ ಮೂಡಿ, ಅಗಸನಹಳ್ಳಿ, ಶಕನವಳ್ಳಿ ಮೊದಲಾದ ಗ್ರಾಮಗಳಲ್ಲಿ ಕಾಯಿಲೆಯ ತೀವ್ರತೆ ಹೆಚ್ಚಾಗಿ ತಾಲೂಕಿನ ಒಳಭಾಗಕ್ಕೆ ಹರಡುತ್ತಿದೆ. ಆದ್ದರಿಂದ ಮೊದಲ ಹಂತವಾಗಿ ಕಾಯಿಲೆ ಬಾರದಂತೆ 5 ಸಾವಿರ ವಾಯಿಲ್ ಲಸಿಕೆ ನೀಡಲಾಗುತ್ತದೆ ಎಂದರು.
    ಈಗಾಗಲೇ ತಾಲೂಕಿನಲ್ಲಿ ಒಂದು ಹಸು ಹಾಗೂ ಎತ್ತು ರೋಗಕ್ಕೆ ಬಲಿಯಾಗಿವೆ. ಕಾಯಿಲೆಯಿಂದ ಆರು ತಿಂಗಳ ಒಳಗಿನ ಕರು ಸಾವನ್ನಪ್ಪಿದರೆ 5 ಸಾವಿರ ರೂ., ಹಸು ಮೃತಪಟ್ಟರೆ 20 ಸಾವಿರ ರೂ. ಹಾಗೂ ಎತ್ತು ಮರಣ ಹೊಂದಿದರೆ 30 ಸಾವಿರ ರೂ. ಪರಿಹಾರ ನೀಡಲು ಇಲಾಖೆಯಿಂದ ಅವಕಾಶವಿದೆ. ತಾಲೂಕು ಪಶು ಇಲಾಖೆಯಿಂದ ಚರ್ಮಗಂಟು ರೋಗದ ಲಸಿಕೆಗಾಗಿ 18 ಲಕ್ಷ ರೂ. ಅನುದಾನ ಕೋರಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts