More

    ಗ್ರಾಮ ವನ್ ಶೀಘ್ರ ಸೇವೆಗೆ ಸಲಹೆ- ಫ್ರಾಂಚೈಸಿಗಳ ತರಬೇತಿ ಕಾರ್ಯಾಗಾರ

    ಮಂಗಳೂರು: ಗ್ರಾಮ ವನ್ ಫ್ರಾಂಚೈಸಿಗಳು, ಗ್ರಾಮದ ಎಲ್ಲರಿಗೂ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಗ್ರಾಮ ವನ್ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ಅವರು ಇತ್ತೀಚೆಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವನ್ ಫ್ರಾಂಚೈಸಿಗಳ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿದರು.

    ಗ್ರಾಮ ವನ್ ಫ್ರಾಂಚೈಸಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದಾಗಿವೆ. ಇನ್ನೂ ಹೆಚ್ಚಿನ ಸೇವೆಗಳನ್ನು ಗ್ರಾಮ ವನ್ ಫ್ರಾಂಚೈಸಿಗಳ ಮೂಲಕ ನೀಡಲು ಸರ್ಕಾರದಿಂದ ಯತ್ನಿಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಗ್ರಾಮ ವನ್ ಫ್ರಾಂಚೈಸಿಗಳು ನಿರ್ವಹಿಸಬೇಕಾದ ಕೆಲಸಗಳ ಬಗ್ಗೆಯೂ ಅವರು ವಿವರಿಸಿದರು.

    ಈಗಾಗಲೇ ಕಂದಾಯ ಇಲಾಖೆ ಸಾಕಷ್ಟು ಸೇವೆಗಳು ಗ್ರಾಮ ವನ್ ಫ್ರಾಂಚೈಸಿಗಳ ಮೂಲಕವೇ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿವೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೈತ ಸಂಪರ್ಕ ಸೇವೆಗಳು, ಸಬ್‌ರಿಜಿಸ್ಟರ್ ಕಚೇರಿ ಕೆಲಸಗಳು, ವಿದ್ಯಾರ್ಥಿ ವೇತನದ ಅರ್ಜಿಗಳು, ಮೋಜಣಿ ತಂತ್ರಾಂಶದ ಮೂಲಕ ಸೇವೆಗಳನ್ನು ಗ್ರಾಮ ವನ್ ಫ್ರಾಂಚೈಸಿಗಳ ಮೂಲಕ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಯತ್ನ ಮಾಡಲಾಗುವುದು ಎಂದರು.

    ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ನೋಂದಣಿ ಚುರುಕುಗೊಳಿಸಿ ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಗ್ರಾಮ ವನ್ ಫ್ರಾಂಚೈಸಿಗಳ ಸೇವೆಗಳು ಜನಸಾಮಾನ್ಯರಿಗೆ ಕಡಿಮೆ ಅವಧಿಯಲ್ಲಿ ವೇಗವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ತಾಂತ್ರಿಕ ದೋಷ ಹಾಗೂ ಕಂದಾಯ ಇಲಾಖೆ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು. ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts