More

    ಬೋಧಕರು ಜಡತ್ವದಿಂದ ಹೊರಬರಬೇಕು

    ಶಿವಮೊಗ್ಗ: ಚರಿತ್ರೆ ಚಲನಶೀಲವಾಗಿರಬೇಕು. ಇತಿಹಾಸ ಬೋಧಕರು ಜಡತ್ವದಿಂದ ಹೊರಬರಬೇಕು ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಅವಿನಾಶ್ ಹೇಳಿದರು.

    ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘ, ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ಶನಿವಾರ ಏರ್ಪಡಿಸಿದ್ದ ಎನ್‌ಇಪಿ ಇತಿಹಾಸ ಪಠ್ಯಕ್ರಮ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಚರಿತ್ರೆ ಗತಕಾಲ ಮಾತ್ರವಲ್ಲ, ಭೂತಕಾಲದ ಘಟನೆಗಳನ್ನು ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ನಿರ್ಧರಿಸುವುದೇ ಇತಿಹಾಸ ಎಂದರು.
    ಸಂಪ್ರದಾಯಗಳ ಅಪಕಲ್ಪನೆಗಳನ್ನು ಆಚೆ ತಳ್ಳಿ ಸೈದ್ಧಾಂತಿಕ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಚರಿತ್ರೆ ಕಟ್ಟಬೇಕು. ಚರಿತ್ರೆ ಕೇವಲ ಮ್ಯೂಸಿಯಂ ಅಲ್ಲ, ಅದು ಜಡತ್ವವೂ ಆಗಬಾರದು. ಕೇವಲ ಅಂಕಿ-ಅಂಶಗಳಿಂದ ಕೂಡಿರಬಾರದು. ಗತಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳನ್ನು ವರ್ತಮಾನಕ್ಕೆ ತಂದು ವಿವರಿಸಬೇಕು ಎಂದು ತಿಳಿಸಿದರು.
    ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಚರಿತ್ರೆಯ ಬೋಧನೆ ಅಧ್ಯಾಪಕರಿಗೆ ಒತ್ತಡ ಉಂಟು ಮಾಡಬಾರದು. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೂ ಆಗಬಾರದು. ಚರಿತ್ರೆಯ ಜತೆಗೆ ರಾಜಕಾರಣ ಬೆಸೆದುಕೊಂಡರೆ ಅಧ್ಯಾಪಕರಿಗೆ ಗೊಂದಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಾಗಾರಗಳ ಮೂಲಕ ಅಧ್ಯಾಪಕರಿಗೆ ಮಾರ್ಗದರ್ಶನ ನೀಡಲು ಇತಿಹಾಸ ಅಧ್ಯಾಪಕರ ಸಂಘ ಶ್ರಮಿಸುತ್ತಿದೆ. ಇದರ ಪ್ರಯೋಜನವನ್ನು ಅಧ್ಯಾಪಕರು ಪಡೆದುಕೊಳ್ಳಬೇಕು ಎಂದರು.
    ಸಹ್ಯಾದ್ರಿ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ. ಮೇಟಿ ಮಲ್ಲಿಕಾರ್ಜುನ, ಕುವೆಂಪು ವಿವಿ ಪರೀಕ್ಷಾ ಮಂಡಳಿ ಅಧ್ಯಕ್ಷ ಪ್ರೊ. ನಾಗೇಶಗೌಡ, ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಶಫೀವುಲ್ಲಾ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಎಚ್.ರಂಗನಾಥ್ ರಾವ್, ಸಹಪ್ರಾಧ್ಯಾಪಕ ಡಾ. ಎಚ್.ಎಂ.ಶಂಭುಲಿಂಗಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಕೆ.ಪ್ರಭಾಕರ್‌ರಾವ್, ಪ್ರೊ. ಎಚ್.ದಿವಾಕರ್, ಪ್ರೊ. ಎಸ್.ಸುಮಾ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts