More

    ಗ್ರಾಪಂ ದಾಖಲೆಗಳಿನ್ನು ಡಿಜಿಟಲ್

    ಬೆಳಗಾವಿ: ಆಡಳಿತದಲ್ಲಿ ಪಾರದರ್ಶಕತೆ, ಕಾಗದಮುಕ್ತ ಕಚೇರಿ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಪ್ರತಿ ಗ್ರಾಪಂಗೆ 25 ಸಾವಿರ ರೂ. ಅನುದಾನ ಬಿಡುಗಡೆ ಮಾಡಿದೆ.

    ಜಿಲ್ಲೆಯ 504 ಗ್ರಾಪಂಗಳನ್ನು ಕಾಗದಮುಕ್ತ ಕಚೇರಿ ಮಾಡುವ ಉದ್ದೇಶದಿಂದ 1994-95ರ ನಂತರದ ಎಲ್ಲ ಕಾಗದಪತ್ರ ರೂಪದ ದಾಖಲೆಗಳನ್ನು ಸ್ಕಾ ್ಯನ್ ಮಾಡಿ ಸಿಡಿ ತಯಾರಿಸುವುದು, ಬಳಿಕ ಅದನ್ನು ಪಂಚಾಯತ್‌ರಾಜ್ ಇಲಾಖೆಯ ವೆಬ್‌ಸೈಟ್ ‘ಪಂಚತಂತ್ರ’ಕ್ಕೆ ಅಪ್‌ಲೋಡ್ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಬೇಕಿದ್ದರೂ ‘ಪಂಚತಂತ್ರ’ ವೆಬ್‌ನಲ್ಲಿ ಸುಲಭವಾಗಿ ಲಭ್ಯವಾಗಲಿದೆ.

    ಡಿಜಿಟಲೀಕರಣ ಆರಂಭ: ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಕಂಪ್ಯೂಟರ್ ಅಳವಡಿಸಲಾಗಿದ್ದು ಆಸ್ತಿಗಳ ಉತಾರ, ಕಾಮಗಾರಿಗಳು, ಕ್ರಿಯಾ ಯೋಜನೆಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಆದರೆ, ದಾಖಲೆಗಳು ‘ಪಂಚತಂತ್ರ’ಕ್ಕೆ ಅಳವಡಿಸಿರಲಿಲ್ಲ. ಇದೀಗ ಆ ಜವಾಬ್ದಾರಿಯನ್ನು ಜಿಲ್ಲಾಮಟ್ಟದಲ್ಲಿ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. 2020ರಲ್ಲಿ ಕೋವಿಡ್-19ನಿಂದಾಗಿ ಕೆಲಸ ಆರಂಭವಾಗಿರಲಿಲ್ಲ. ಇದೀಗ 2021ರ ಜನವರಿಯಿಂದ ಜಿಲ್ಲೆಯ 10 ತಾಪಂ ಕಚೇರಿಗಳಲ್ಲಿ ಗ್ರಾಪಂ ದಾಖಲೆಗಳ ಡಿಜಿಟಲೀಕರಣ ಕಾರ್ಯ ಆರಂಭವಾಗಿದೆ.

    ಹೊಂದಾಣಿಕೆ ಆಗದ ದಾಖಲೆ: ಗ್ರಾಪಂಗಳಲ್ಲಿ 1994ರಿಂದ 2000ರ ಅವಯಲ್ಲಿ ಆಸ್ತಿಗಳ ವಿವರ, ತೆರಿಗೆ ಸಂಗ್ರಹ, ಖರ್ಚು-ವೆಚ್ಚಗಳು ಸೇರಿದಂತೆ ಇನ್ನಿತರ ಮಾಹಿತಿಗಳ ದಾಖಲೆಗಳು ಸಿಗದೆ ಗ್ರಾಪಂ ಸಿಬ್ಬಂದಿ ಪರದಾಡುತ್ತಿದ್ದಾರೆ. ಕೆಲ ಗ್ರಾಪಂಗಳಲ್ಲಿ ಆಸ್ತಿಗಳು, ಗ್ರಾಮಸಭೆ, ಸಾಮಾನ್ಯ ಸಭೆಯ ನಡಾವಳಿಗಳು, ಗ್ರಾಪಂ ಸಿಬ್ಬಂದಿ ರಿಜಿಸ್ಟ್ರರ್‌ಗಳು ಸಮರ್ಪಕವಾಗಿಲ್ಲ. ಹಾಗಾಗಿ ದಾಖಲೆಗಳ ಹೊಂದಾಣಿಕೆ ಆಗದೆ ಕಾಗದ ರೂಪದ ದಾಖಲೆಗಳನ್ನು ಸ್ಕಾ ್ಯನ್ ಮಾಡಲು ವಿಳಂಬವಾಗುತ್ತಲಿದೆ.

    ಎರಡು ತಿಂಗಳಲ್ಲಿ ಪೂರ್ಣ: ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಲ್ಲಿನ ಜನಸಂಖ್ಯೆ, ವ್ಯಾಪ್ತಿ, ಆದಾಯ ಅಂಶಗಳನ್ನು ಪರಿಗಣಿಸಿ ದೊಡ್ಡ ಗ್ರಾಪಂ ಮತ್ತು ಮಧ್ಯಮ ಗ್ರಾಪಂಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಅಲ್ಲದೆ, ಮೇಲ್ದರ್ಜೆಗೇರಿದ ಗ್ರಾಪಂಗಳ ಎಲ್ಲ ಕಾಗದದ ದಾಖಲೆಗಳನ್ನು ಸ್ಕಾ ್ಯನ್ ಮಾಡಿ ಸಿಡಿ ತಯಾರಿಸಿ ಸಂಬಂಸಿದ ನಗರಾಭಿವೃದ್ಧಿ ಇಲಾಖೆ ನೀಡಲಾಗುತ್ತಿದೆ. ಸಣ್ಣ ಗ್ರಾಪಂಗಳ ಕಾಗದದ ದಾಖಲೆಗಳನ್ನು ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 60 ಗ್ರಾಪಂಗಳ ಡಿಜಿಟಲೀಕರಣ ಕಾರ್ಯ ನಡೆದಿದ್ದು, ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಾಲೂಕು ಪಂಚಾಯಿತಿ ಅಕಾರಿಗಳು ಮಾಹಿತಿ ನೀಡಿದ್ದಾರೆ.

    ಪಂಚತಂತ್ರ ವೆಬ್‌ಸೈಟ್‌ನಲ್ಲಿ ಸಿಗಲಿರುವ ದಾಖಲೆಗಳು

    1994-95ರ ನಂತರದ ಕಾಮಗಾರಿಗಳ ರಿಜಿಸ್ಟ್ರರ್, ಆಸ್ತಿಗಳು, ಗ್ರಾಮಸಭೆ, ಸಾಮಾನ್ಯ ಸಭೆಯ ನಡಾವಳಿಗಳು, ಗ್ರಾಪಂ ಸಿಬ್ಬಂದಿ ರಿಜಿಸ್ಟ್ರರ್, ನ್ಯಾಯಾಲಯದ ಆದೇಶ, ವಸತಿ ಯೋಜನೆಗಳ ಲಾನುಭವಿಗಳು, ತೆರಿಗೆ ಸಂಗ್ರಹ, ಖರ್ಚು-ವೆಚ್ಚಗಳು, ವಾರ್ಷಿಕ ಲೆಕ್ಕ ಪರಿಶೋಧನೆ ವರದಿಗಳು, ನರೇಗಾ ಕಾಮಗಾರಿಗಳು, ನರೇಗಾ ಕಾರ್ಮಿಕರು, ನಮೂನೆ 9, 11 ದಾಖಲೆ, ಮ್ಯೂಟೇಷನ್ ರಿಜಿಸ್ಟರ್, ಜಮಾಬಂದಿ ವಿವರಗಳು, ಗ್ರಾಪಂ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷ, ವಾಣಿಜ್ಯ ಕಟ್ಟಡಗಳು, ಬಡಾವಣೆಗಳು, ಬ್ಯಾಂಕ್‌ಗಳಲ್ಲಿನ ವಹಿವಾಟು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ್ಯಾವ ಯೋಜನೆಗೆ ಎಷ್ಟು ಹಣ ಬಿಡುಗಡೆ ಆಗಿದೆ ಎಂಬ ಮಾಹಿತಿ ಸೇರಿ ಗ್ರಾಪಂನ ಎಲ್ಲ ದಾಖಲೆಗಳೂ ಇನ್ನು ‘ಪಂಚತಂತ್ರ’ ವೆಬ್‌ಸೈಟ್‌ನಲ್ಲಿ ಲಭಿಸಲಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಗ್ರಾಪಂಗಳನ್ನು ಡಿಜಿಟಲೀಕರಣಗೊಳಿಸುವ ಕೆಲಸ ಆಯಾ ತಾಪಂ ಕಚೇರಿಗಳಲ್ಲಿ ನಡೆಯುತ್ತಿದೆ. ಲಾಕ್‌ಡೌನ್‌ನಿಂದಾಗಿ ಈ ಕಾರ್ಯ ವಿಳಂಬವಾಗಿತ್ತು. ಇದೀಗ ಮತ್ತೆ ಆರಂಭಗೊಂಡಿದ್ದು, ವರ್ಷದ ಅಂತ್ಯದ ಒಳಗಾಗಿ ಎಲ್ಲ ಕೆಲಸ ಪೂರ್ಣಗೊಳ್ಳುವ ಸಾಧ್ಯತೆಯಿದೆ.
    | ಎಸ್.ಬಿ. ಮುಳ್ಳಳ್ಳಿ ಜಿಪಂ ಉಪ ಕಾರ್ಯದರ್ಶಿ

    | ಮಂಜುನಾಥ ಕೋಳಿಗುಡ್ಡ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts