More

    ಶಾಂತಿ ಕಾಪಾಡುವಂತೆ ರೈತರಿಗೆ ಕೇಂದ್ರ ಮನವಿ.. 5ನೇ ಸುತ್ತಿನ ಮಾತುಕತೆಗೆ ಆಹ್ವಾನ!

    ನವದೆಹಲಿ: ಎಲ್ಲ ವಿಧದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಘೋಷಿಸಲು ಒತ್ತಾಯಿಸಿ ಪಂಜಾಬ್-ಹರಿಯಾಣದ ಶಂಭು ಗಡಿ ಬಳಿ ಬುಧವಾರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ನಡೆಸಲು ರೈತರು ಮುಂದಾಗಿದ್ದರು. ಆದರೆ ಟ್ರಾಫಿಕ್​ ಜಾಮ್​, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್​ ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.

    ಇದನ್ನೂ ಓದಿ: ‘ರಶ್ಮಿಕಾ ಜೊತೆ ನನ್ನ ಸಂಬಂಧ ಹಾಗೇ ಮುಂದುವರೆದಿದೆ’: ಮದುವೆ ಬಗ್ಗೆ ಮಾಜಿ ಗೆಳೆಯ ಕಾಮೆಂಟ್!

    ಈ ನಡುವೆ ಕೃಷಿ ಸಚಿವ ಅರ್ಜುನ್ ಮುಂಡಾ ಎಲ್ಲಾ ವಿಷಯಗಳ ಬಗ್ಗೆ ಐದನೇ ಸುತ್ತಿನ ಚರ್ಚೆಗೆ ಪ್ರತಿಭಟನಾನಿರತ ರೈತರನ್ನು ಬುಧವಾರ ಆಹ್ವಾನಿಸಿದ್ದಾರೆ.

    ರೈತರ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ನಾವು ಮಾತುಕತೆಯ ಮೂಲಕ ಮಾತ್ರ ಪರಿಹಾರವನ್ನು ಕಂಡುಕೊಳ್ಳಬಹುದು. ನಾನು ಅವರನ್ನು ಚರ್ಚೆಗೆ ಆಹ್ವಾನಿಸಿದ್ದೇನೆ ಮತ್ತು ಶಾಂತಿಯನ್ನು ಕಾಪಾಡಿ ಮತ್ತು ಎಲ್ಲರಿಗೂ ಒಳ್ಳೆಯದನ್ನು ಕಂಡುಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಅರ್ಜುನ್ ಮುಂಡಾ ಸುದ್ದಿಗಾರರಿಗೆ ತಿಳಿಸಿದರು.

    ‘ದಿಲ್ಲಿ ಚಲೋ’ ಆಂದೋಲನದ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ರೈತ ಮುಖಂಡರು ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಬುಧವಾರ ಪಂಜಾಬ್ ಮತ್ತು ಹರಿಯಾಣ ಗಡಿಯಿಂದ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಪುನರಾರಂಭಿಸಿದರು. ಆದರೆ ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾ ನಿರತರನ್ನು ಚದುರಿಸಿದರು.

    ಫೆಬ್ರವರಿ 18 ರಂದು ರೈತ ಮುಖಂಡರೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಮೂವರು ಕೇಂದ್ರ ಸಚಿವರ ಸಮಿತಿಯು ಐದು ವರ್ಷ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಸಂಸ್ಥೆಗಳಿಂದ ಎಂಎಸ್​ಪಿ ನಲ್ಲಿ ಖರೀದಿಸಲು ಒಪ್ಪಿಗೆ ಸೂಚಿಸಿತ್ತು. ಆದರೆ ರೈತ ಮುಖಂಡರು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿ ರಾಷ್ಟ್ರ ರಾಜಧಾನಿಯತ್ತ ತಮ್ಮ ಪಾದಯಾತ್ರೆಯನ್ನು ಫೆ.21ರಂದು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದ್ದರು.

    ಈರುಳ್ಳಿ ರಫ್ತು ನಿಷೇಧ ಮಾರ್ಚ್ 31ರವರೆಗೆ ವಿಸ್ತರಣೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts