More

    ಈರುಳ್ಳಿ ರಫ್ತು ನಿಷೇಧ ಮಾರ್ಚ್ 31ರವರೆಗೆ ವಿಸ್ತರಣೆ..!

    ನವದೆಹಲಿ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಇದೇ ಆರ್ಥಿಕ ವರ್ಷದ ಅಂತ್ಯದವರೆಗೆ ವಿಸ್ತರಿಸಿದೆ. ದೇಶೀಯ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆ ನಿಯಂತ್ರಣದಲ್ಲಿಡಲು ಕೇಂದ್ರವು ಪ್ರಯತ್ನಿಸುತ್ತಿರುವುದರಿಂದ ರಫ್ತು ನಿಷೇಧವು 2024ರ ಮಾರ್ಚ್ 31 ರವರೆಗೆ ಮುಂದುವರಿಯುತ್ತದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಇದನ್ನೂ ಓದಿ: ನಾಗ ಚೈತನ್ಯ ಜೊತೆ ಸಮಂತಾ ವಿಚ್ಛೇದನಕ್ಕೆ ಕಾರಣ ಆಕೆಯೇ? ವರ್ಷಗಳ ಬಳಿಕ ಬಹಿರಂಗಪಡಿಸಿದ ಸಮಂತಾ!

    ಕಳೆದ ಅಕ್ಟೋಬರ್ ನಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾದ ಕಾರಣ ರಫ್ತಿಗೆ ಕೇಂದ್ರ ನಿರ್ಬಂಧ ಹೇರಿತ್ತು. ಇದು ಬೆಲೆ ಇಳಿಕೆಗೆ ಕಾರಣವಾಯಿತು. ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಈರುಳ್ಳಿ ಸಿಕ್ಕಿತ್ತು. 25ರೂ.ಗಿಂತ ಕಡಿಮೆ ಬೆಲೆಗೆ ಚಿಲ್ಲರೆ ಮಾರಾಟವಾಗಿತ್ತು.

    ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲ್‌ಗಾಂವ್‌ನಲ್ಲಿ ಫೆಬ್ರವರಿ 19 ರಂದು ಕ್ವಿಂಟಾಲ್‌ಗೆ 1,280 ರೂ.ಗಳಿಂದ 1,800 ರೂ.ಗೆ ಮಾರಾಟವಾಗಿತ್ತು. ಕೇಂದ್ರವು ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ ಎಂಬ ವರದಿಗಳಿಂದ 40.62 ರಷ್ಟು ಏರಿಕೆಯಾಗಿತ್ತು. ಆದರೆ ಕೇಂದ್ರ ಮಾರ್ಚ್ 31ರ ತನಕ ರಫ್ತು ನಿಷೇಧ ಮುಂದುವರಿಸುವ ಘೋಷಣೆ ಮಾಡಿರುವುದರಿಂದ ಮತ್ತೆ ಯಥಾ ಸ್ಥಿತಿಗೆ ಬೆಲೆ ತಲುಪಿದೆ ಎನ್ನಲಾಗುತ್ತಿದೆ.
    ಕಡಿಮೆ ವಿಸ್ತೀರ್ಣದಿಂದಾಗಿ ರಬಿ (ಚಳಿಗಾಲ) ಈರುಳ್ಳಿ ಉತ್ಪಾದನೆಯು ಕಡಿಮೆಯಾಗುವ ನಿರೀಕ್ಷೆಯಿದೆ. 2023 ರಬಿ ಋತುವಿನಲ್ಲಿ ಈರುಳ್ಳಿ ಉತ್ಪಾದನೆಯು 22.7 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ. ಕೃಷಿ ಸಚಿವಾಲಯದ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ರಬಿ ಈರುಳ್ಳಿ ವ್ಯಾಪ್ತಿಯನ್ನು ಅಂದಾಜು ಮಾಡುತ್ತಿದ್ದಾರೆ.

    ಸಂಸತ್ ಅಧಿವೇಶ ಕರೆದು ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ತರಬೇಕು: ಕೇಂದ್ರಕ್ಕೆ ಪಂಧೇರ್ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts