More

    ಸಾರಿಗೆ ಮುಷ್ಕರ ಮತ್ತಷ್ಟು ತೀವ್ರ: ನಾಳೆಯಿಂದ ಉಪವಾಸ ಸತ್ಯಾಗ್ರಹ

    ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಜತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಬಿಗಿಪಟ್ಟು ಹಿಡಿದಿರುವ ಸಾರಿಗೆ ನೌಕರರು ಹೋರಾಟವನ್ನು ತೀವ್ರ ಗೊಳಿಸಿದ್ದಾರೆ. ಅತ್ತ ಸರ್ಕಾರವೂ ನೌಕರರ ಮುಷ್ಕರಕ್ಕೆ ಮಣಿಯುತ್ತಿಲ್ಲ. ನಾಳೆಯಿಂದ(ಭಾನುವಾರ) ಖಾಸಗಿ ಬಸ್​ಗಳನ್ನು ಬಳಸಿಕೊಳ್ಳುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಇದರ ಬೆನ್ನಲ್ಲೇ ನಾಳೆಯಿಂದ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಮುಷ್ಕರವನ್ನು ತೀವ್ರಸ್ವರೂಪಕ್ಕೆ ಕೊಂಡೊಯ್ಯುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಎಚ್ಚರಿಸಿದ್ದಾರೆ.

    ಶನಿವಾರ ಸಂಜೆ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡ ಸಾರಿಗೆ ಸಿಬ್ಬಂದಿ, ಸರ್ಕಾರಕ್ಕೆ ಇನ್ನಷ್ಟು ಬಿಸಿಮುಟ್ಟಿಸಲು ಸಜ್ಜಾಗಿದ್ದಾರೆ. ಎಲ್ಲ ಡಿಪೋಗಳಲ್ಲೂ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ. ಆಯಾ ಭಾಗದಲ್ಲಿ ಗಾಂಧಿ ಪ್ರತಿಮೆ ಇದ್ದರೆ ಧರಣಿಯು ಡಿಪೋಗಳಿಂದ ಪ್ರತಿಮೆ ಬಳಿಗೆ ಶಿಫ್ಟ್ ಆಗಲಿದೆ.

    ಸಾರಿಗೆ ಮುಷ್ಕರ ಮತ್ತಷ್ಟು ತೀವ್ರ: ನಾಳೆಯಿಂದ ಉಪವಾಸ ಸತ್ಯಾಗ್ರಹಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುವಂತೆ ಎಲ್ಲ ಸಾರಿಗೆ ಸಿಬ್ಬಂದಿಗೆ ಕೋಡಿಹಳ್ಳಿ ಚಂದ್ರಶೇಖರ್​ ಮನವಿ ಮಾಡಿದ್ದಾರೆ. ನಮಗೆ ಅರೆ ಹೊಟ್ಟೆಯ ವೇತನ ನೀಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ ಕೋಡಿಹಳ್ಳಿ, ಸರ್ಕಾರ ಮಾತುಕತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ. ಮಾತುಕತೆಗೆ ಚಂದ್ರಶೇಖರ್ ಬೇಡ ಅಂತ ಹೇಳ್ತಿರೋ ಉದ್ದೇಶವೇನು? ನಾನೇನು ಉಗ್ರಗಾಮಿಯೇ? ಎಂದು ಕೋಡಿಹಳ್ಳಿ ಕಿಡಿಕಾರಿದ್ದಾರೆ.

    ಸರ್ಕಾರ ಮೊದಲು ಮಾತುಕತೆಗೆ ಕರೆಯಲಿ. ಖಾಸಗಿ ಬಸ್ ಅನ್ನ ಓಡಿಸ್ತಾರೋ, ಬೇರೇ ಏನೇನ್ ಪ್ರಯತ್ನ ಮಾಡ್ತಾರೋ ಮಾಡ್ಲಿ. ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತೇವೆ. ಎಸ್ಮಾ ಜಾರಿ ಮಾಡಿದ್ರೂ ಮಾಡಲಿ ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಸವಾಲು ಹಾಕಿದ್ದಾರೆ. ಎಸ್ಮಾವನ್ನ ಯಾವ ಆಧಾರದ ಮೇಲೆ ಜಾರಿ ಮಾಡ್ತಾರೆ? ಎಂದು ಪ್ರಶ್ನಿಸಿದ್ದಾರೆ.

    ಸಾರಿಗೆ ಮುಷ್ಕರ ಮತ್ತಷ್ಟು ತೀವ್ರ: ನಾಳೆಯಿಂದ ಉಪವಾಸ ಸತ್ಯಾಗ್ರಹಸಾರ್ವಜನಿಕರಿಗೆ ತೊಂದ್ರೆ ಆಗ್ತಿದೆ. ಅದಕ್ಕೆ ನಾವು ಕಾರಣವಲ್ಲ. ಜನರಿಗೆ ತೊಂದರೆ ಮಾಡ್ತಿರೋದು ಸರ್ಕಾರ ಮತ್ತು ಸಾರಿಗೆ ಸಚಿವರು ಎಂದು ಆಕ್ರೋಶ ಹೊರಹಾಕಿದ್ದಾರೆ. ನನ್ನಿಂದ ಬಸ್​ಗಳ ಮೇಲೆ ಕಲ್ಲು ತೂರಾಟ ಆಗಿದೆ ಅನ್ನೋದು ಸುಳ್ಳು. ಇದಕ್ಕೆ ಪೂರಕ ದಾಖಲೆ ಇದ್ದರೆ ಸರ್ಕಾರ ಮತ್ತು ಸಚಿವರು ಕೊಡಲಿ ಎಂದಿದ್ದಾರೆ.

    ಇನ್ನು ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ಗೌರವ ಅಧ್ಯಕ್ಷರು. ಅವರನ್ನು ಬಿಟ್ಟು ಸರ್ಕಾರದ ಜತೆಗೆ ಮಾತುಕತೆಗೆ ಬರುವ ಪ್ರಶ್ನೆಯೇ ಇಲ್ಲ. ಅವರನ್ನ ಕರೆದರೇ ಮಾತ್ರ ಸಭೆಗೆ ಬರುತ್ತೇವೆ. ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ನೌಕರರು ಹೇಳಿದ್ದಾರೆ.

    ಸಾರಿಗೆ ಮುಷ್ಕರ: ಮತ್ತೊಬ್ಬ ಬಸ್​ ಚಾಲಕ ಬಲಿ

    ವಿಷ ಕುಡಿಯುವ ಮುನ್ನ ನಾವು ಪ್ರೀತಿಸಿದ್ದೇ ತಪ್ಪು… ಎಂದು ಕಣ್ಣೀರಿಟ್ಟರು! ಪ್ರಿಯತಮೆ ಸ್ಥಳದಲ್ಲೇ ಸಾವು, ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts